ಕರ್ನಾಟಕ

karnataka

ETV Bharat / briefs

17ನೇ ಲೋಕಸಭೆಯ ಮೊದಲ ಕಲಾಪ ಜೂನ್​​​ 6ರಂದು ಆರಂಭ..? - ನರೇಂದ್ರ ಮೋದಿ

ಮೊದಲ ಕಲಾಪದ ಆರಂಭದಲ್ಲಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ.

ಕಲಾಪ

By

Published : May 27, 2019, 4:41 PM IST

ನವದೆಹಲಿ: ಇದೇ ಗುರುವಾರ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಮೊದಲ ಲೋಕಸಭಾ ಕಲಾಪದ ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಹದಿನೇಳನೇ ಲೋಕಸಭೆಯ ಮೊದಲ ಕಲಾಪ ಜೂನ್ ಆರರಂದು ಆರಂಭವಾಗಲಿದ್ದು ಜೂನ್​​ 15ರಂದು ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಮೋ ಪಟ್ಟಾಭಿಷೇಕಕ್ಕೆ ಡೇಟ್​ ಫಿಕ್ಸ್​.. ಯಾರಿಗೆ ಮೋದಿ ಸಂಪುಟದಲ್ಲಿ ಚಾನ್ಸ್​, ಕರ್ನಾಟಕದಿಂದ ಇವರೇನಾ!?

ಮೇ 31ರಂದು ನರೇಂದ್ರ ಮೋದಿಯ ಸಚಿವ ಸಂಪುಟ ಸದಸ್ಯರು ಸಭೆ ಸೇರಲಿದ್ದು ಈ ವೇಳೆ, ಮೊದಲ ಕಲಾಪದ ದಿನಾಂಕ ಅಂತಿಮವಾಗಲಿದೆ. ಮೊದಲ ಕಲಾಪದ ಆರಂಭದಲ್ಲಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಚುನಾವಣೆಯಲ್ಲಿ ಕಾಶಿ ವಿಶ್ವರೂಪ ತೋರಿದೆ... ನಾನು ನಿಮ್ಮಂತೆ ಒಬ್ಬ ಕಾರ್ಯಕರ್ತ, ವಾರಣಾಸಿಯಲ್ಲಿ ನಮೋ ಅಬ್ಬರ

ಮೇ 30ರಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಜೊತೆಯಲ್ಲಿ ಸಂಪುಟ ಸದಸ್ಯರೂ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ಗುರುವಾರ ಸಂಜೆ 7 ಗಂಟೆಗೆ ನಡೆಯಲಿದೆ.

ABOUT THE AUTHOR

...view details