ಕರ್ನಾಟಕ

karnataka

ETV Bharat / briefs

ಏರ್​ ಶೋ, ಬಂಡೀಪುರ ಬಳಿಕ ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ! - ಬೆಂಕಿ

ರಾಜ್ಯದಲ್ಲಿ ಒಂದರ ಮೇಲೊಂದರಂತೆ ಅಗ್ನಿ ದುರಂತಗಳು ಸಂಭವಿಸುತ್ತಲೇ ಇದೆ. ಈಗ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೂ ಬೆಂಕಿ ಆವರಿಸಿದ್ದು, ಬೆಂಕಿ ನಂದಿಸಲು ಆಗ್ನಿಶಾಮಕದಳ ಸಿಬ್ಬಂದಿ ಹರಸಾಹಪಟ್ಟರು.

ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ

By

Published : Feb 25, 2019, 11:52 AM IST

ಚಿಕ್ಕಬಳ್ಳಾಪುರ: ಚಾಮರಾಜನಗರದ ಬಂಡೀಪುರ ಹಾಗೂ ಯಲಹಂಕ ಏರ್​ ಶೋ ವೇಳೆ ಸಂಭವಿಸಿದ ಅಗ್ನಿ ದುರಂತದ ಬೆನ್ನಲ್ಲೇ ಈಗ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೂ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಆಗ್ನಿಶಾಮಕದಳ ಸಿಬ್ಬಂದಿ ಹರಸಾಹಪಟ್ಟರು.

ನಂದಿ ಬೆಟ್ಟಕ್ಕೂ ಕಾಲಿಟ್ಟ ಬೆಂಕಿ

ಯಾರೂ ಹೋಗದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳವು ಸಹ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಬೆಂಕಿಯ ಕಿನ್ನಾಲಿಗೆ ಬೆಟ್ಟವನ್ನು ಆವರಿಸಿದ್ದು ನಂದಿಬೆಟ್ಟವೆಲ್ಲಾ ಅಗ್ನಿಗಾಹುತಿಯಾಗಿದೆ.

ಬೇಸಿಗೆ ಆರಂಭವಾದ ಕಾರಣ ಮರ-ಗಿಡಗಳ ಎಲೆಗಳೆಲ್ಲಾ ಒಣಗಿದ್ದು, ಮತ್ತಷ್ಟು ಬೆಂಕಿ ಉಲ್ಬಣಿಸಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರು ಹೋಗುವ ಕಾಲು ದಾರಿಯೆಲ್ಲಾ ಸುಟ್ಟು ಹೋಗಿದೆ.

ABOUT THE AUTHOR

...view details