ಲಂಡನ್: ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದೆದುರು 36 ರನ್ಗಳಿಂದ ಆಸ್ಟ್ರೇಲಿಯಾ ಸೋಲನುಭವಿಸಿದೆ. ಈ ಮಧ್ಯೆ ಆಸೀಸ್ ಸ್ಪಿನ್ನರ್ ಮೇಲೆ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪ ಕೇಳಿಬಂದಿದ್ದು, ಫಿಂಚ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಜಂಪಾ ಮೇಲೆ ಚೆಂಡು ವಿರೂಪದ ಶಂಕೆ... ಫಿಂಚ್ ನೀಡಿದ ಉತ್ತರ ಏನು? - ಇಂಗ್ಲೆಂಡ್
ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ ಕ್ಷೇತ್ರ ರಕ್ಷಣೆ ವೇಳೆ ಪದೇ-ಪದೇ ಜೇಬಿನಲ್ಲಿ ಕೈ ಇಟ್ಟು ಚೆಂಡನ್ನು ಉಜ್ಜುತ್ತಿದ್ದರು. ಆದ್ದರಿಂದಲೇ ಜಂಪಾ ಚೆಂಡು ವಿರೂಪಗೊಳಿಸುತ್ತಿದ್ದಾರೆಂಬ ಅನುಮಾನ ಮೂಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೂರಾರು ಫೋಟೋ, ವಿಡಿಯೋಗಳು ಹರಿದಾಡುತ್ತಿದ್ದು, ಜಂಪಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿ ಟ್ರೋಲ್ ಮಾಡಲಾಗಿತ್ತು.
![ಜಂಪಾ ಮೇಲೆ ಚೆಂಡು ವಿರೂಪದ ಶಂಕೆ... ಫಿಂಚ್ ನೀಡಿದ ಉತ್ತರ ಏನು?](https://etvbharatimages.akamaized.net/etvbharat/prod-images/768-512-3523494-35-3523494-1560173991035.jpg)
ಫಿಂಚ್
ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ ಕ್ಷೇತ್ರ ರಕ್ಷಣೆ ವೇಳೆ ಪದೇ-ಪದೇ ಜೇಬಿನಲ್ಲಿ ಕೈ ಇಟ್ಟು ಚೆಂಡನ್ನು ಉಜ್ಜುತ್ತಿದ್ದರು. ಆದ್ದರಿಂದಲೇ ಜಂಪಾ ಚೆಂಡು ವಿರೂಪಗೊಳಿಸುತ್ತಿದ್ದಾರೆಂಬ ಅನುಮಾನ ಮೂಡಿತ್ತು. ಇದಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ನೂರಾರು ಫೋಟೋ, ವಿಡಿಯೋಗಳು ಹರಿದಾಡುತ್ತಿದ್ದು, ಜಂಪಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿ ಟ್ರೋಲ್ ಮಾಡಲಾಗಿತ್ತು.
ಈಗಾಗಲೇ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಆರೋಪದಿಂದ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಆಗಗಿರುವುದರಿಂದ ಮತ್ತೆ ಅಂತಹ ತಪ್ಪನ್ನು ಯಾರು ಮಾಡುವುದಿಲ್ಲ ಎಂಬುದು ಫಿಂಚ್ ಹೇಳಿದ್ದಾರೆ.
Last Updated : Jun 10, 2019, 11:28 PM IST