ಕರ್ನಾಟಕ

karnataka

ETV Bharat / briefs

ಉತ್ತರದ 72 ಕ್ಷೇತ್ರಗಳಲ್ಲಿ ಭರ್ಜರಿ ವೋಟಿಂಗ್​: ಅಮಿತಾಬ್, ಹೇಮಾ ಕುಟುಂಬದಿಂದ ಮತದಾನ - ಅಮಿತಾಬ್, ಹೇಮಾ

ಮುಂಬೈನಲ್ಲಿ ಬಿಗ್​ ಬಿ ಅಮಿತಾಬ್​ ಬಚ್ಚನ್​, ಅಭಿಷೇಕ್​, ಐಶ್ವರ್ಯ ಸೇರಿದಂತೆ ಕುಟುಂಬ ವರ್ಗ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿತು.

ಮತದಾನ

By

Published : Apr 29, 2019, 2:28 PM IST

ಮುಂಬೈ:ಮೋದಿ ಹಣೆಬರಹವನ್ನ ನಿರ್ಧರಿಸುವ ಪ್ರಮುಖ 72 ಸ್ಥಾನಗಳ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ಮುಂಬೈನಲ್ಲಿ ಖ್ಯಾತ ಬಾಲಿವುಡ್​ ತಾರೆಗಳು ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.

ಮುಂಬೈನಲ್ಲಿ ಬಿಗ್​ ಬಿ ಅಮಿತಾಬ್​ ಬಚ್ಚನ್​, ಅಭಿಷೇಕ್​, ಐಶ್ವರ್ಯ ಸೇರಿದಂತೆ ಕುಟುಂಬ ವರ್ಗ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿತು.

ಇನ್ನು ನಟಿ ಕಂಗನಾ ರಣಾವತ್,​ ಖರ್​ ಪೊಲಿಂಗ್​ ಬೂತ್​ನಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಮತದಾನ ಕೇಂದ್ರದಿಂದ ಹೊರ ಬಂದು ಶಾಹಿ ಹಚ್ಚಿದ ಬೆರಳು ತೋರಿಸಿ ಖುಷಿ ಹಂಚಿಕೊಂಡರು. ಇನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಹೇಮಾ ಮಾಲಿನಿ, ಮಗಳು ಇಶಾ ಡಿಯೋಲ್​, ಅಹಾನ ಡಿಯೋಲ್​ ವಿಲೆ ಪಾರ್ಲೆ ಮತ ಕೇಂದ್ರದಲ್ಲಿ ಹಕ್ಕು ಚಲಾವಣೆ ಮಾಡಿದರು

ಮತ್ತೊಂದು ಕಡೆ ಮುಂಬೈನ ಬೂತ್​ ನಂಬರ್ 167ರಲ್ಲಿ ಬಾಲಿವುಡ್​ನ ಪ್ರಖ್ಯಾತ ನಿರ್ದೇಶಕ ಮಧುರ್​ ಭಂಡಾರ್ಕರ್​ ಹಕ್ಕು ಚಲಾವಣೆ ಮಾಡಿದರು. ಇನ್ನು ಗಾಂಧಿನಗರದ ಪೊಲಿಂಗ್​ ಬೂತ್​​ನಲ್ಲಿ ಶಿವಸೇನಾ ನಾಯಕ ಉದ್ದವ್​ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮತದಾನ ಮಾಡಿದರು.

ಇನ್ನು ಮುಂಬೈನ ನಾರ್ತ್​ ಸೆಂಟ್ರಲ್​​​​​ ಲೋಕಸಭಾ ಚುನಾವಣಾ ವ್ಯಾಪ್ತಿಯಲ್ಲಿ ಪೂನಂ ಮಹಾಜನ್​ ವೋಟಿಂಗ್​ ಮಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್​​​ ಕುಟುಂಬ ಸಮೇತರಾಗಿ ಬಂದು ಬಾಂದ್ರಾದಲ್ಲಿ ಹಕ್ಕು ಚಲಾಯಿಸಿದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಬಾಂದ್ರಾದಲ್ಲಿ ಮತದಾನ ಮಾಡಿದರು.

ABOUT THE AUTHOR

...view details