ನವದೆಹಲಿ:ವಿಶ್ವದಾದ್ಯಂತ ಕೋಟ್ಯಾಂತರ ಕ್ರಿಕೆಟ್ ಆಭಿಮಾನಿಗಳನ್ನು ಕಂಡಿರುವ ದ.ಆಫ್ರಿಕಾದ ವಿಲಿಯರ್ಸ್ ತಮ್ಮ ತೋಳಲ್ಲಿ ಬಲ, ಮನದಲ್ಲಿ ಆತ್ಮ ವಿಶ್ವಾಸವಿದ್ದರೂ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಹೌದು, ಕೇವಲ 34 ವರ್ಷಕ್ಕೆ ಎಬಿ ಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿತ್ತು. ಬ್ಯಾಟಿಂಗ್, ಫೀಲ್ಡಿಂಗ್ನಲ್ಲಿ ಯುವ ಕ್ರಿಕೆಟಿಗರನ್ನೆ ನಾಚಿಸುವಂತೆ ಕ್ರೀಡಾಂಗಣದಲ್ಲಿ ಚುರುಕಾಗಿ ಓಡಾಡುವ, ಬ್ಯಾಟಿಂಗ್ನಲ್ಲಿ ಯಾವುದೇ ಕ್ರಮಾಂಕದಲ್ಲಿ ಬಂದರೂ ಬೌಂಡರಿ-ಸಿಕ್ಸರ್ ಸಿಡಿಸುವ ಮಿ.360 ಖ್ಯಾತಿಯ ಎಬಿಡಿ ನಿವೃತ್ತಿ ಅಚಾನಕ್ಕಾಗಿ ಕ್ರಿಕೆಟ್ನಿಂದ ಮರೆಯಾಗಲು ಬಯಸಿದ್ದರ ಹಿಂದಿನ ಸತ್ಯವನ್ನು ಅವರೇ ಹೊರಹಾಕಿದ್ದಾರೆ.
ತಂಡದಲ್ಲಿ ಮೂಲೆಗುಂಪಾಗಿದ್ರ ಎಬಿಡಿ!
ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಕಾರ್ಯಕ್ರಮದಲ್ಲಿ ತಮ್ಮ ನಿವೃತ್ತಿ ಕುರಿರು ಹೇಳಿಕೆ ನೀಡಿರುವ ಎಬಿಡಿ, 'ನಾನು ನಿವೃತ್ತಿಯಾಗುವ ಹಿಂದಿನ 3 ವರ್ಷಗಳಲ್ಲಿ ಕೆಲವು ಆಯ್ದ ಪಂದ್ಯಗಳಲ್ಲಿ ಮಾತ್ರ ಆಡುವ ನಿರ್ಧಾರ ಮಾಡಿದ್ದೆ. ಅದೇ ಪ್ರಕಾರ ಆಡಲು ಶುರು ಮಾಡಿದೆ. ಆದರೆ ಇದಕ್ಕೆ ನಮ್ಮವರಿಂದಲೇ ಭಾರೀ ಟೀಕೆ ಕೇಳಿಬಂತು. ಇದು ನನ್ನ ನಿವೃತ್ತಿಯ ನಿರ್ಧಾರದಲ್ಲಿ ಪ್ರಮುಖ ಕಾರಣವಾಯಿತು.
'2019ರ ವಿಶ್ವಕಪ್ ಆಡಲು ಬಯಸಿದ್ದೆ. ಆದರೆ ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ನನ್ನಲ್ಲಿ ಬಂತು. ಇದಲ್ಲದೆ ನಾನು ನನ್ನ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬೇಕೆಂದುಕೊಂಡಿದ್ದು ಕೂಡ ನಿವೃತ್ತಿಗೆ ಮತ್ತೊಂದು ಪ್ರಮುಖ ಕಾರಣ. ನಾನು 15 ವರ್ಷ ಕ್ರಿಕೆಟ್ನಿಂದ ಬಳಲಿದ್ದೆ, ಸದಾ ಕ್ರಿಕೆಟ್ನಲ್ಲಿ ಕಾರ್ಯನಿರತನಾಗಿದ್ದರಿಂದ ಒತ್ತಡದಲ್ಲಿದ್ದರಿಂದ ಮಾನಸಿಕವಾಗಿ ವಿಶ್ರಾಂತಿ ಅಗತ್ಯವೆನಿಸಿ ನಿವೃತ್ತಿ ಬಯಸಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು ಐಪಿಎಲ್,ಪಿಎಸ್ಎಲ್, ಬಿಪಿಎಲ್, ಝಾನ್ಸಿ ಸೂಪರ್ ಲೀಗ್ ಸೇರಿದಂತೆ ಹಲವಾರು ಟಿ20 ಲೀಗ್ಗಳಲ್ಲಿ ಎಬಿಡಿ ತಮ್ಮ ಆಟವನ್ನು ಮುಂದುವರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಎಬಿಡಿ ದ.ಆಫ್ರಿಕಾ ಪರ 114 ಟೆಸ್ಟ್ ಪಂದ್ಯಗಳನ್ನಾಡಿದ್ದು 8765 ರನ್ಹಾಗೂ 228 ಏಕದಿನ ಪಂದ್ಯಗಳಿಂದ 9577 ರನ್ಗಳಿಸಿದ್ದಾರೆ. ಟೆಸ್ಟ್ನಲ್ಲಿ 22 , ಏಕದಿನ ಪಂದ್ಯಗಳಲ್ಲಿ 25 ಶತಕ ಸಿಡಿಸಿದ್ದಾರೆ.