ತುಮಕೂರು:ಬದುಕಿನಲ್ಲಿ ಇರುವ ಕಷ್ಟ ಮತ್ತು ಸುಖದ ನಡುವೆ ಬರುವಂತಹ ಅನುಭವವೇ ಸಾಹಿತ್ಯ. ಕವನ, ಕಾದಂಬರಿಗಳಲ್ಲಿ ಕೇವಲ ಕಲ್ಪನೆಗಳು ಮಾತ್ರ ಇರುವುದಿಲ್ಲ, ಬದುಕಿನಲ್ಲಿ ಸಿಗುವಂತಹದ್ದು ಕೇವಲ ಅನುಭವ. ಆದರೆ, ರಸಾನುಭವ ಸಿಗುವುದು ಕಾವ್ಯದಲ್ಲಿ ಮಾತ್ರ ಎಂದು ಸಾಹಿತಿ ಅಮೋಘಂ ಚೈತ್ರ ಕಾರಂಜಿ ಅಭಿಪ್ರಾಯ ಪಟ್ಟರು. ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು 'ಮಧುರ ಸಂಗಮ, ಮೌನದಿಂಚರ, ಭಾವೋಲ್ಲಾಸ, ಜಗವೆಲ್ಲ ಕಾವ್ಯಮಯ, ಕಚಗುಳಿ, ಶಾಮಗಾನ' ಎಂಬ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾವ್ಯದಲ್ಲಿ ಭಾವ ಮತ್ತು ಭಾವನೆ ಮುಖ್ಯ: ಹೀಗೆ ಹೇಳಿದ ಸಾಹಿತಿ ಯಾರು ಗೊತ್ತೇ? - Kavugoshti
ಕವನ, ಕಾದಂಬರಿಗಳಲ್ಲಿ ಕೇವಲ ಕಲ್ಪನೆಗಳು ಮಾತ್ರ ಇರುವುದಿಲ್ಲ, ಬದುಕಿನಲ್ಲಿ ಸಿಗುವಂತಹದ್ದು ಕೇವಲ ಅನುಭವ ಎಂದು ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು 'ಮಧುರ ಸಂಗಮ, ಮೌನದಿಂಚರ, ಭಾವೋಲ್ಲಾಸ, ಜಗವೆಲ್ಲ ಕಾವ್ಯಮಯ, ಕಚಗುಳಿ, ಶಾಮಗಾನ' ಎಂಬ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು
ಕವನ, ಕಾದಂಬರಿಗಳಲ್ಲಿ ಕೇವಲ ಕಲ್ಪನೆಗಳು ಮಾತ್ರ ಇರುವುದಿಲ್ಲ, ಬದಲಾಗಿ ಜೀವನದಲ್ಲಿ ಆಗುವಂತಹ ಅನುಭವವನ್ನು ಅಭಿವ್ಯಕ್ತಗೊಳಿಸುವುದಕ್ಕೆ ಅಕ್ಷರ ರೂಪವನ್ನು ಮನುಷ್ಯ ಕಂಡುಕೊಂಡ ಒಂದು ಬಗೆ. ಬದುಕಿನಲ್ಲಿ ಇರುವ ಕಷ್ಟ ಮತ್ತು ಸುಖದ ನಡುವೆ ಬರುವಂತಹ ಅನುಭವವೇ ಸಾಹಿತ್ಯ.
ಬದುಕಿನಲ್ಲಿ ಸಿಗುವಂತಹದ್ದು ಕೇವಲ ಅನುಭವ. ಆದರೆ ರಸನುಭಾವ ಸಿಗುವುದು ಕಾವ್ಯದಲ್ಲಿ ಮಾತ್ರ, ಪ್ರತಿಯೊಂದು ಅಕ್ಷರ ಪದಗಳ ನಡುವೆ ಅಕ್ಷರಗಳು ಸೇರಿದಾಗ ಒಂದೊಂದು ರೀತಿಯ ಅರ್ಥ ಬರುತ್ತದೆ, ಆ ಅರ್ಥವೇ ರಸಾನುಭವ. ಕಾವ್ಯದಲ್ಲಿ ಭಾವ ಮತ್ತು ಭಾವನೆ ಬಹಳ ಮುಖ್ಯ ಎಂದರು.
ನಂತರ ರಾಜ್ಯ ವಿವಿಧ ಭಾಗಗಳಿಂದ ಬಂದಿದ್ದಂತಹ ಸಾಹಿತ್ಯಾಸಕ್ತರಿಂದ ಕವಿಗೋಷ್ಠಿ ನಡೆಸಲಾಯಿತು.
TAGGED:
Kavugoshti