ಭುವನೇಶ್ವರ (ಒಡಿಶಾ): ನವಜಾತ ಗಂಡು ಮಗುವೊಂದನ್ನು ತಂದೆ 10,000 ರೂ.ಗೆ ಮಾರಾಟ ಮಾಡಿದ್ದು, ಕಮಿಷನರೇಟ್ ಪೊಲೀಸರು ಮತ್ತು ಚೈಲ್ಡ್ ಲೈನ್ ಅಧಿಕಾರಿಗಳು ಶನಿವಾರ ಮಗುವನ್ನು ರಕ್ಷಿಸಿದ್ದಾರೆ.
ತನ್ನ ಆರು ದಿನದ ಮಗುವನ್ನೇ ಮಾರಿದ ತಂದೆ.. ಪೊಲೀಸರಿಂದ ಹಸುಳೆಯ ರಕ್ಷಣೆ
ತಂದೆಯೊಬ್ಬ ತನ್ನ ನವಜಾತ ಗಂಡು ಮಗುವನ್ನು 10,000 ರೂ.ಗೆ ಮಾರಾಟ ಮಾಡಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.
child
ಆರು ದಿನದ ನವಜಾತ ಶಿಶುವನ್ನು ಮಾಲಿ ಸಾಹಿ ಪ್ರದೇಶದಿಂದ ರಕ್ಷಿಸಿದ ನಂತರ ದತ್ತು ಕೇಂದ್ರದಲ್ಲಿ ಇಡಲಾಗುವುದು ಎಂದು ಚೈಲ್ಡ್ ಲೈನ್ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದಿಂದ ಚೈಲ್ಡ್ ಲೈನ್ ಅಧಿಕಾರಿಗಳು ನಗರದ ಮಾಲಿಸಾಹಿ ಪ್ರದೇಶದ ಬಳಿಯ ಮಹಿಳೆಯ ಮನೆಯಿಂದ 10 ದಿನಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು, ಗಂಡು ಮಗುವನ್ನು ಚೈಲ್ಡ್ ಲೈನ್ಗೆ ಹಸ್ತಾಂತರಿಸಲಾಗಿದೆ.