ಇಂದೋರ್: ಕಾಮುಕ ತಂದೆಯೋರ್ವ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಕಳೆದ ಮೂರು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗಿದ ಹೀನ ಕೃತ್ಯ ಮಧ್ಯಪ್ರದೇಶದ ಇಂದೋರ್ನಲ್ಲಿ ಬೆಳಕಿಗೆ ಬಂದಿದೆ.
ಚಾಕುವಿನಿಂದ ಬೆದರಿಸಿ 8 ವರ್ಷ,16 ಹಾಗೂ 18 ವರ್ಷದ ಹೆಣ್ಣು ಮಕ್ಕಳ ಮೇಲೆ ಕಾಮುಕ ತಂದೆ ಈ ದುಷ್ಕೃತ್ಯ ಎಸಗಿದ್ದು, ಇದರಿಂದ ರೋಸಿ ಹೋದ 8 ವರ್ಷದ ಮಗು ಕಳೆದ ಕೆಲ ದಿನಗಳ ಹಿಂದೆ ತಾಯಿಗೆ ಮಾಹಿತಿ ನೀಡಿದ್ದಾಳೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಇನ್ನಿಬ್ಬರ ಹೆಣ್ಣು ಮಕ್ಕಳನ್ನು ಕೇಳಿದಾಗ ಅವರು ತಮ್ಮ ಮೇಲೆ ನಡೆದ ಕೃತ್ಯದ ಬಗ್ಗೆ ಸತ್ಯ ಬಾಯಿ ಬಿಟ್ಟಿದ್ದಾರೆ.