ಕರ್ನಾಟಕ

karnataka

ETV Bharat / briefs

0001 ನಂಬರ್​ಗಾಗಿ ಭಾರೀ ಘರ್ಷಣೆ... 9999ಕ್ಕೆ ಜಸ್ಟ್​ 10 ಲಕ್ಷ ರೂ...!! ಏನಿದು ನಂಬರ್​ ಗೇಮ್​? - ಹೈದರಾಬಾದ್

ಫ್ಯಾನ್ಸಿ ನಂಬರ್​​ ಹಂಚಿಕೆ ಮಾಡಿ ಹೈದರಾಬಾದ್​ನ ಖೈರತಾಬಾದ್​​​ನ  ಕೇಂದ್ರ ವಲಯ ಕಚೇರಿ ಒಂದೇ ದಿನ  ಬರೋಬ್ಬರಿ 30 ಲಕ್ಷದ 55 ಸಾವಿರದ 748 ರೂಪಾಯಿ ಆದಾಯ ಗಳಿಸಿದೆ.

ಫ್ಯಾನ್ಸಿ ನಂಬರ್​​

By

Published : Apr 16, 2019, 10:54 AM IST

ಖೈರತಾಬಾದ್​( ಹೈದರಾಬಾದ್​) :ಫ್ಯಾನ್ಸಿ ನಂಬರ್​... ಹೊಸ ವಾಹನ ಖರೀದಿಸಿದ ಮೇಲೆ ಜನ ಆರ್​ಟಿಒ ಕಚೇರಿಯಲ್ಲಿ ವಾಹನ ನೋಂದಣಿ ಮಾಡಿಸಲೇಬೇಕು. ಹೌದು ಹೊಸ ವಾಹನ ಖರೀದಿ ಮಾಡಿದ ಮೇಲೆ ನೆಚ್ಚಿನ ವಾಹನಕ್ಕೆ ಅದೃಷ್ಟದ ನಂಬರ್​ಗಾಗಿ ಗ್ರಾಹಕರು ಮುಗಿ ಬೀಳ್ತಾರೆ.

ಪ್ಯಾನ್ಸಿ ನಂಬರ್​​ ಹಂಚಿಕೆ ಮಾಡಿ ಹೈದರಾಬಾದ್​ನ ಖೈರತಾಬಾದ್​​​ನ ಕೇಂದ್ರ ವಲಯ ಕಚೇರಿ ಒಂದೇ ದಿನ ಬರೋಬ್ಬರಿ 30 ಲಕ್ಷದ 55 ಸಾವಿರದ 748 ರೂಪಾಯಿ ಆದಾಯ ಗಳಿಸಿದೆ. TS09FE 9999 ನಂಬರ್​ಗೆ ಬರೋಬ್ಬರಿ 10 ಲಕ್ಷ ನೀಡಿ ಸಂಸ್ಥೆಯೊಂದು ಈ ನಂಬರ್​ ರಿಜಿಸ್ಟ್ರೇಷನ್​ ಮಾಡಿಸಿಕೊಂಡಿದೆ.

ಎಸ್​ಎಸ್​ಎಲ್​ ಪ್ರಾಪರ್ಟಿಸ್​​ ಸಂಸ್ಥೆ ಇಷ್ಟು ಮೊತ್ತದ ಹಣ ನೀಡಿ ಈ ನಂಬರ್​ ಪಡೆದುಕೊಂಡಿದೆ. ಇನ್ನು ಹಳೆ ಸರಣಿ ಮುಗಿಸಿ ಹೊಸ ಸರಣಿಯಾದ TS09FF -1 ನಂಬರ್ ಆರಂಭವಾಗಿದ್ದು, ಈ ಸಂಖ್ಯೆಯನ್ನ ಎಫ್​ಆರ್​ಆರ್​ ಹಿಲ್​ ಹೋಟೆಲ್ಸ್​ ನವರು ಸುಮಾರು 6.95 ಲಕ್ಷ ರೂ. ನೀಡಿ ರಿಜಿಸ್ಟ್ರೇಷನ್​ ಮಾಡಿಸಿಕೊಂಡಿದ್ದಾರೆ.ಇನ್ನು 99 ನೇ ನಂಬರ್​ ​ಎಮರ್ಜಿನ್​ ಅಗ್ರಿನೋವ್ ಸಂಸ್ಥೆ 2.78 ಲಕ್ಷ ರೂ ತೆತ್ತು ಪಡೆಯುವಲ್ಲಿ ಯಶಸ್ವಿಯಾಗಿದೆ.

0001 ಕ್ಕಾಗಿ ಹೊಡೆದಾಟ
ಈ ನಡುವೆ 0001 ನಂಬರ್​ಗಾಗಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಈ ನಂಬರ್ ಪಡೆಯಲು ನಡೆದ ತಿಕ್ಕಾಟದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಮೇಲೆ ಕೈ ಮಾಡಿದ ಘಟನೆಯೂ ನಡೆದಿದೆ.​

ABOUT THE AUTHOR

...view details