ಚಿತ್ರದುರ್ಗ: ರಾಜ್ಯಾದ್ಯಂತ ಮನೆಮಾತಾಗಿರುವ ಕೋತಿರಾಜ್, ಅಮೆರಿಕದ ಎತ್ತರದ ಏಂಜೆಲ್ ಫಾಲ್ಸ್ ಏರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಆ ಸುದ್ದಿ ಸುಳ್ಳು ಎಂದು ಕೋತಿರಾಜ್ ಆತ್ಮೀಯ ಬಸವರಾಜ್ ವಿಡಿಯೋ ಮೂಲಕ ಹೇಳಿದ್ದಾರೆ.
ಕೋತಿರಾಜ್ ಏಂಜೆಲ್ ಫಾಲ್ಸ್ ಏರಿಲ್ಲ, ಹಾಗಾದ್ರೆ ಅವರು ಎಲ್ಲಿದ್ದಾರೆ?: ಅವರ ಗೆಳೆಯ ಹೇಳಿದ್ದಿಷ್ಟು.. - ಕೋತಿರಾಜ್ ಬಗ್ಗೆ ಸುಳ್ಳು ಸುದ್ದಿ
ರಾಜ್ಯಾದ್ಯಂತ ಮನೆಮಾತಾಗಿರುವ ಕೋತಿರಾಜ್, ಅಮೆರಿಕದ ಎತ್ತರದ ಏಂಜೆಲ್ ಫಾಲ್ಸ್ ಏರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಈ ಸುದ್ದಿ ಸುಳ್ಳು ಎಂದು ಕೋತಿರಾಜ್ ಆತ್ಮೀಯ ಬಸವರಾಜ್ ವಿಡಿಯೋ ಮೂಲಕ ತಿಳಿಸಿದ್ದಾರೆ.
![ಕೋತಿರಾಜ್ ಏಂಜೆಲ್ ಫಾಲ್ಸ್ ಏರಿಲ್ಲ, ಹಾಗಾದ್ರೆ ಅವರು ಎಲ್ಲಿದ್ದಾರೆ?: ಅವರ ಗೆಳೆಯ ಹೇಳಿದ್ದಿಷ್ಟು.. fake news about kotiraj in chamrajnagar](https://etvbharatimages.akamaized.net/etvbharat/prod-images/768-512-6253506-thumbnail-3x2-chaa.jpg)
ಕೋತಿರಾಜ್ ಗೆಳೆಯ ಬಸವರಾಜ
ಕೋತಿರಾಜ್ ಗೆಳೆಯ ಬಸವರಾಜ
ಸದ್ಯ ಕೋತಿರಾಜ್ ದೇಹದ ತೂಕ ಇಳಿಸುವ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಏಂಜೆಲ್ ಫಾಲ್ಸ್ ಏರಲು ತೂಕ ಇಳಿಸುವುದು ಅವಶ್ಯವಾಗಿದೆ. ಹಾಗಾಗಿ ಹಿರಿಯ ಸ್ನೇಹಿತರ ಸಲಹೆ ಮೇರೆಗೆ ಅವರು ತೂಕ ಇಳಿಸುವ ಕಸರತ್ತು ನಡೆಸುತ್ತಿದ್ದಾರೆ.
ಇದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಆಯುರ್ವೇದಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್ನಲ್ಲಿ ಏಂಜಲ್ ಫಾಲ್ಸ್ ಏರುವ ನಿರ್ಧಾರದ ಕುರಿತು ಕೋತಿರಾಜ್ ಶೀಘ್ರವೇ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
Last Updated : Mar 1, 2020, 2:32 PM IST