ತಿರುವನಂತಪುರಂ(ಕೇರಳ): ಆನ್ಲೈನ್ ವಂಚಕರು ಇಷ್ಟು ದಿನ ಜನಸಾಮಾನ್ಯರನ್ನು ಗುರಿಯಾಗಿಸಿ ವಂಚಿಸುತ್ತಿದ್ದರು. ಆದರೆ ಇದೀಗ ಪೊಲೀಸರಿಗೇ ನಕಲಿ ಫೇಸ್‌ಬುಕ್ ಮೂಲಕ ಸುಲಿಗೆಗೆ ಇಳಿದಿರುವ ಘಟನೆ ನಡೆದಿದೆ.
ತಿರುವನಂತಪುರಂನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಸಖಾರೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ರಚಿಸುವ ಮೂಲಕ ಹಣ ಸುಲಿಗೆ ಮಾಡುವ ಪ್ರಯತ್ನ ನಡೆಸಿದ್ದಾರೆ ವಂಚಕರು.
ನಕಲಿ ಖಾತೆಯಲ್ಲಿ ಎಡಿಜಿಪಿಯ ನಿಜವಾದ ಫೇಸ್‌ಬುಕ್ ಖಾತೆಯ ಪ್ರೊಫೈಲ್ ಚಿತ್ರವನ್ನು ಸಹ ಬಳಸಿಕೊಂಡಿದ್ದಾರೆ.
ಈ ನಕಲಿ ಖಾತೆಯ ಮೂಲಕ ಎಡಿಜಿಪಿಯ ಸ್ನೇಹಿತರಿಗೆ 10,000 ರೂ ಕೇಳುವ ಸಂದೇಶ ಕಳುಹಿಸಿದ ಬಳಿಕ ಈ ಹಗರಣ ಬೆಳಕಿಗೆ ಬಂದಿದೆ. ಅಪರಿಚಿತ ಅಪರಾಧಿಗಳು ಎಡಿಜಿಪಿ ವಿಜಯ್ ಸಖಾರೆ ಹೆಸರಿನಲ್ಲಿ ನಕಲಿ ಖಾತೆಯಲ್ಲಿ ಗೂಗಲ್ ಪೇ ಮೂಲಕ ಹಣ ಪಡೆಯಲು ಬಳಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಘಟನೆಯ ತನಿಖೆ ಆರಂಭಿಸಿದ್ದಾರೆ.