ವೆಲ್ಲಿಂಗ್ ಟನ್:ಆಸ್ಟ್ರಿಯಾ ದೇಶದ ಫಾರ್ಮುಲಾ ಒನ್ ರೇಸಿಂಗ್ ದಿಗ್ಗಜ ನಿಕ್ಕಿ ಲೌಡ್ ತಮ್ಮ 70ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೂರು ಸಲ ವಿಶ್ವ ಕಾರ್ ರೇಸಿಂಗ್ ದಿಗ್ಗಜ ನಿಕ್ಕಿ ಲೌಡ್ ವಿಧಿವಶ - undefined
ಬರೋಬ್ಬರಿ 171 ಕಾರ್ ರೇಸ್ಗಳಲ್ಲಿ ಭಾಗಿಯಾಗಿದ್ದ ನಿಕ್ಕಿ ಲೌಡ್, 25 ಸಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. 1976ರಲ್ಲಿ ಆಘಾತಕಾರಿ ಅಪಘಾತಕ್ಕೊಳಗಾದ ನಂತರ ಕೂಡ ನಿಕ್ಕಿ ಅನೇಕ ಕಾರ್ ರೇಸ್ಗಳಲ್ಲಿ ಭಾಗಿಯಾಗಿದ್ದು, ಗಮನಾರ್ಹ ಸಂಗತಿ.
ನಿಕ್ಕಿ ಲೌಡ್ ವಿಧಿವಶ
1975, 1977 ಹಾಗೂ 1984 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಫೆರಾರಿ ಹಾಗೂ ಮೆಕ್ ಲಾರನ್ ಕಾರ್ ತಯಾರಿಕ ಕಾರು ಓಡಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. 171 ರೇಸ್ಗಳಲ್ಲಿ ಭಾಗಿಯಾಗಿರುವ ದಾಖಲೆ ಕೂಡ ಇವರು ಬರೆದಿದ್ದಾರೆ. 1976ರಲ್ಲಿ ನಿಕ್ಕಿ ಕಾರ್ ರೇಸಿಂಗ್ ವೇಳೆ ಭೀಕರ ಅಪಘಾತಕ್ಕೊಳಗಾಗಿ ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಇವರು ಹಲವಾರು ಉದ್ಯಮಗಳು ಸೇರಿ ವಿಮಾನ ಹಾಗೂ ಎಫ್ 1 ಮ್ಯಾನೇಜ್ಮೆಂಟ್ನಲ್ಲಿ ಅಗ್ರ ಸ್ಥಾನದಲ್ಲಿ ಸೇವೆ ಸಲ್ಲಿಸಿದರು.
ಮೆಕ್ ಲಾರನ್ ಕಾರು ತಯಾರಕ ಕಂಪನಿ ವಿಧಿವಶರಾದ ನಿಕ್ಕಿ ಲೌಡ್ಗೆ ಟ್ವಿಟರ್ ಮೂಲಕ ಸಂತಾಪ ಸೂಚಿಸಿದೆ.