ಕರ್ನಾಟಕ

karnataka

ETV Bharat / briefs

ನೇತ್ರದಾನ ಮಹಾದಾನ: ಅಗರ್‌ವಾಲ್‌ ಆಸ್ಪತ್ರೆಯಲ್ಲಿ ಯಶಸ್ವಿ ಕಣ್ಣು ಶಸ್ತ್ರಚಿಕಿತ್ಸೆ - undefined

ಹುಬ್ಬಳ್ಳಿಯ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಕಣ್ಣು ದಾನದ ಮೂಲಕ ಇಂತಹ ಚಿಕಿತ್ಸೆ ಮಾಡಿ ಸಂಪೂರ್ಣ ಅಂಧತ್ವ ಹೊಂದಿದವರಿಗೆ ದೃಷ್ಟಿ ನೀಡಬಹುದು ಎಂದು ಆಸ್ಪತ್ರೆ ನಿರ್ದೇಶಕ ಶ್ರೀಕೃಷ್ಣ ನಾಡಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಮಾತನಾಡಿದರು

By

Published : Jun 12, 2019, 8:29 PM IST

ಹುಬ್ಬಳ್ಳಿ: ಇಲ್ಲಿನ ಅಗರವಾಲ್​ ಕಣ್ಣಿನ ಆಸ್ಙತ್ರೆಯಲ್ಲಿ ದೃಷ್ಟಿದೋಷದಿಂದ ಚಿಕಿತ್ಸೆಗೆ ದಾಖಲಾದ ಎಸ್​.ವಿನಯಬಾಬು ಅವರಿಗೆ ಆಪ್ಟಿಕಲ್ ಕೆರಟೋಪ್ಲಾಸ್ಟಿ ಮತ್ತು ಡಿಎಎಲ್​ಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಮೂಲಕ ಅವರಿಗೆ ದೃಷ್ಟಿ ನೀಡಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಶ್ರೀಕೃಷ್ಣನಾಡಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂಪ್ರೇರಣೆಯಿಂದ ನೇತ್ರದಾನ ಮಾಡುವ ಮೂಲಕ ದೇಶದ ಅಂಧತ್ವ ನಿವಾರಣೆ ಮಾಡಬಹುದು ಎಂದು ಸಲಹೆ ನೀಡಿದರು.

ವಿನಯಬಾಬು ಎಂಬವರ ಅವರ ಕಣ್ಣಿನ ದೃಷ್ಟಿ ಮಂದವಾಗುತ್ತಿತ್ತು. ಜತೆಗೆ ಗಂಭೀರ ಸ್ವರೂಪ ತಾಳಿ ಕಣ್ಣಿನ ಒಳರಚನೆಯ ಕಾರ್ನಿಯಾವನ್ನು ಹಾನಿಗೊಳಿಸುವ ಹಂತಕ್ಕೆ ತಲುಪಿತ್ತು. ಇದೇ ಸಂದರ್ಭದಲ್ಲಿ ಕಾರ್ನಿಯಾ ಆ್ಯಂಡ್ ರಿಫ್ರಾಕ್ಟಿವ್ ಸರ್ಜರಿಯ ಹಿರಿಯ ತಜ್ಞ ರಘು ನಾಗರಾಜ ನೇತೃತ್ವದ ತಂಡ 34 ವರ್ಷದ ರೋಗಿಗೆ ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.

ರೋಗಿ ವಿನಯಬಾಬು ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೋರೇಶನ್ ಮತ್ತು ಎಡಗಣ್ಣಿನಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಎಂಬ ತೊಂದರೆಯಿಂದ ಬಳಲುತ್ತಿದ್ದರು ಎಂದರು.

For All Latest Updates

TAGGED:

ABOUT THE AUTHOR

...view details