ಬ್ರಸ್ಸೆಲ್ಸ್(ಬೆಲ್ಜಿಯಂ): ಪಾಕಿಸ್ತಾನದಲ್ಲಿನ ಅಪಾಯಕಾರಿ ಉಗ್ರ ಮೌಲಾನಾ ಮಸೂದ್ ಅಜರ್ ಅವರನ್ನ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿ ವಿಶ್ವಸಂಸ್ಥೆ ನಿನ್ನೆ ಪ್ರಕಟಣೆ ಹೊರಡಿಸಿದೆ. ಈ ಮೂಲಕ 10 ವರ್ಷಗಳ ಭಾರತದ ಹೋರಾಟಕ್ಕೆ ಜಯ ಸಿಕ್ಕಿದೆ.
ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ, ಜಾಗತಿಕ ಒತ್ತಡಕ್ಕೆ ಮಣಿದು ಯೆಸ್ ಎಂದಿದೆ. ಈ ನಡುವೆ ಯೂರೋಪಿಯನ್ ಒಕ್ಕೂಟ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ರವಾನಿಸಿದೆ.
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ ಪ್ರಕರಣಗಳು, ಹಾಗೂ ರಾಷ್ಟ್ರದಲ್ಲಿರುವ ತಾರತಮ್ಯ ನೀತಿಯನ್ನ ಹೊಡೆದೋಡಿಸಲು ಕೈಗೊಳ್ಳದ ಕ್ರಮಗಳ ಹಿನ್ನೆಲೆಯಲ್ಲಿ ಎಚ್ಚರಿಕೆಕೊಟ್ಟಿರುವ ಯುರೋಪಿಯನ್ ಒಕ್ಕೂಟ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಎಲ್ಲ ಅನುದಾನಗಳನ್ನ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.