ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಖ ಇಲ್ಲ, ಅದಕ್ಕೋಸ್ಕರ ಬೇರೆಯವರ ಮುಖ ತೋರಿಸಿ ಮತ ಯಾಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆ ಮುಖ ಇಲ್ಲ, ಬೇರೊಬ್ಬರ ಹೆಸರಿನಲ್ಲಿ ಮತ ಕೇಳ್ತಾರೆ: ಮಾಜಿ ಸಚಿವ ರಮಾನಾಥ ರೈ ಟೀಕೆ - election
ನಳಿನ್ ಕುಮಾರ್ ತನ್ನ ಹೆಸರೇಳದೆ ಬೇರಡಯವರ ಹೆಸರೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆಂದರೆ ಕ್ಷೇತ್ರದಲ್ಲಿ ಅವರ ಸಾಧನೆ ಏನು ಎಂಬುದು ಗೊತ್ತಾದಂತೆ ಎಂದು ಮಾಜಿ ಸಚಿವಾ ರಮಾನಥ್ ರೈ ವ್ಯಂಗ್ಯವಾಡಿದ್ದಾರೆ.
ದ ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರಂತೆ ಕಾಂಗ್ರೆಸ್‌ಗೆ ಅಭ್ಯರ್ಥಿಯ ಹೆಸರನ್ನು ಹೇಳಲಾಗದ ದಿವಾಳಿತನ ಬಂದಿಲ್ಲ. ಬಿಜೆಪಿಗೆ ಅಭ್ಯರ್ಥಿಯ ಹೆಸರು ಹೇಳಲಾಗದ ದಿವಾಳಿತನ ಬಂದಿದೆ .ಅವರಿಗೆ ಮುಖ ಇಲ್ಲ .ಅದಕ್ಕೆ ಅವರು ಬೇರೆಯವರ ಮುಖ ತೋರಿಸಿ ಮತ ಕೇಳುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ಗೆ ಕೂಡ ಮುಖ ಇಲ್ಲ. ಅದಕ್ಕೋಸ್ಕರ ಅವರು ಇನ್ನೊಬ್ಬರ ಮುಖ ತೋರಿಸಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಳಿನ್ ಕುಮಾರ್ ಕಟೀಲ್ ತನ್ನ ಸಾಧನೆಯ ಪಟ್ಟಿಯಲ್ಲಿ 16,500 ಕೋಟಿ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಪಂಚಾಯತಿಗೆ ಬಂದ ಹಣವನ್ನು , ಸಿಆರ್ಎಫ್ ನಿಧಿಯಿಂದ ಬಂದ ಹಣವನ್ನು ಸೇರಿಸಿ ಲೆಕ್ಕ ಕೊಟ್ಟಿದ್ದಾರೆ. ಸಿಆರ್ಎಫ್ ನಿಧಿಯು ರಾಜ್ಯಕ್ಕೆ ಬಂದದ್ದನ್ನು ಲೆಕ್ಕ ತೋರಿಸಿ ಬ್ಯಾನರ್ ಹಾಕಿ ಸಾಧನೆ ತಮ್ಮ ಎಂದು ಹೇಳುತ್ತಾರೆ. ಆದರೆ ಅವರಿಗೆ ಅಪ್ಪನಾಣೆ ಅದರ ವಿಚಾರ ಗೊತ್ತಿಲ್ಲ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ನಾಚಿಕೆ ಇಲ್ಲ .ಇನ್ನೊಬ್ಬರ ಕೆಲಸವನ್ನು ತಮ್ಮದು ಎಂದು ಹೇಳಿಕೊಂಡು ತಿರುಗುತ್ತಾರೆ ಎಂದು ಟೀಕಿಸಿದರು.