ಕರ್ನಾಟಕ

karnataka

ETV Bharat / briefs

ಮೇ ತಿಂಗಳಲ್ಲಿ ರಾಜ್ಯದ ಜನರು ಇನ್ನಷ್ಟು ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ: ಫನಾ ಅಧ್ಯಕ್ಷ‌

ಆಕ್ಸಿಜನ್ ಅಭಾವದಿಂದ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವುದಾಗಿ ಹೇಳಿದೆ. ಇನ್ನು ನಮ್ಮ ರಾಜ್ಯದಲ್ಲಿ 700 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪತಿ ಆಗ್ತಿದೆ. ಆದರೆ, ಮೇ ತಿಂಗಳಲ್ಲಿ ಈ ಲೆಕ್ಕಕ್ಕೂ ಮೀರಿ ಆಕ್ಸಿಜನ್ ಬೇಕಾಗಬಹುದು ಎಂದು ಫಾನಾ ಅಧ್ಯಕ್ಷ ಡಾ. ಪ್ರಸನ್ನರಿಂದ ಆಘಾತಕಾರಿ ಮಾಹಿತಿ ನೀಡಿದ್ದಾರೆ.

Everyone should careful in may month for corona
Everyone should careful in may month for corona

By

Published : Apr 29, 2021, 9:42 PM IST

Updated : Apr 29, 2021, 10:34 PM IST

ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಸೋಂಕು ಇನ್ನಷ್ಟು ಭೀಕರವಾಗಿರಲಿದೆ ಎಂದು ಖಾಸಗಿ‌ ಆಸ್ಪತ್ರೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದೆ.

ಆಕ್ಸಿಜನ್ ಅಭಾವದಿಂದ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವುದಾಗಿ ಹೇಳಿದೆ. ಇನ್ನು ನಮ್ಮ ರಾಜ್ಯದಲ್ಲಿ 700 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪತಿ ಆಗ್ತಿದೆ. ಆದರೆ, ಮೇ ತಿಂಗಳಲ್ಲಿ ಈ ಲೆಕ್ಕಕ್ಕೂ ಮೀರಿ ಆಕ್ಸಿಜನ್ ಬೇಕಾಗಬಹುದು ಎಂದು ಫಾನಾ ಅಧ್ಯಕ್ಷ ಡಾ. ಪ್ರಸನ್ನರಿಂದ ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಫನಾ ಅಧ್ಯಕ್ಷ‌

ಮೇ ತಿಂಗಳಲ್ಲಿ ಸರಿ ಸುಮಾರು 1,400 ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚುವರಿ ಅಗತ್ಯ ಬೀಳಬಹುದು. ಈಗಲೇ ಅಗತ್ಯದಷ್ಟು ಆಕ್ಸಿಜನ್ ಪೂರೈಕೆ ಆಗದೆ ಸೋಂಕಿತರು ಆಕ್ಸಿಜನ್ ಇಲ್ಲದೇ ಪರದಾಡ್ತಿದ್ದಾರೆ. ಇನ್ನೂ 1,400 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಎದುರಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಆಕ್ಸಿಜನ್ ಜೊತೆಗೆ ರೆಮ್ಡೆಸಿವಿರ್ ಕೂಡ ಅಭಾವ ಬೀಳಲಿದೆ. ಇನ್ನು ಪ್ರತಿದಿನ‌ 35 ಸಾವಿರ ಸೋಂಕಿತರು ಮೇ ತಿಂಗಳಲ್ಲಿ ಪತ್ತೆಯಾಗಬಹುದು.

ಈ 35 ಸಾವಿರದ ಪೈಕಿ 30 ಸಾವಿರ ಸೋಂಕಿತರಿಗೆ ರೆಮ್ಡೆಸಿವಿರ್​ ಅಗತ್ಯ ಬೀಳುತ್ತೆ. ಕೇಂದ್ರ ಸರ್ಕಾರ ತಿಂಗಳಿಗೆ ಒಂದು ಲಕ್ಷ ವೈಲ್ ರೆಮ್ಡೆಸಿವಿರ್​ ಪೂರೈಕೆ ಮಾಡುವ ಭರವಸೆ ಕೊಟ್ಟಿದೆ. ಆದರೆ ನಿತ್ಯ 30 ಸಾವಿರ ರೆಮ್ಡೆಸಿವಿರ್​ ಅಗತ್ಯ ಬಿದ್ದರೆ, ಸೋಂಕಿತರು ಮತ್ತಷ್ಟು ಕಂಗೆಡಲಿದ್ದಾರೆ. ಹೀಗಾಗಿ ಸರ್ಕಾರ ರೆಮ್ಡೆಸಿವಿರ್ ಕೊಡುವುದಾಗಿ ಹೇಳಿದೆ.‌

ಇನ್ನು ಒಂದು ಲಕ್ಷ ವೈಲ್ ರೆಮ್ಡೆಸಿವಿರ್​ ಯಾವ ಮೂಲೆಗೂ ಸಾಕಾಗುವುದಿಲ್ಲ. ಸರ್ಕಾರ ಅಗತ್ಯತೆಗೆ ತಕ್ಕಂತೆ ರೆಮ್ಡೆಸಿವಿರ್​ ಪೂರೈಸದ್ದಿದ್ದರೆ ಖಾಸಗಿ ಆಸ್ಪತ್ರೆಗಳು ಔಷಧ ಎಲ್ಲಿಂದ ತರುವುದು.? ಸೂಕ್ತ ರೀತಿಯಲ್ಲಿ ವೈದ್ಯಕೀಯ ಬೇಡಿಕೆಗಳು ಈಡೇರದಿದ್ದರೆ ಸೋಂಕಿತರ ಸಾವುನ್ನಪ್ಪುವ ಸಂಖ್ಯೆ ಹೆಚ್ಚಾಗಲಿದೆ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

Last Updated : Apr 29, 2021, 10:34 PM IST

ABOUT THE AUTHOR

...view details