ಸೌತಾಂಪ್ಟನ್:ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಕೆರಿಬಿಯನ್ ಪಡೆ ಆತಿಥೇಯ ಇಂಗ್ಲೆಂಡ್ ತಂಡವನ್ನ ಎದುರಿಸಲಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯವನ್ನ ಗೆದ್ದಿರುವ ಇಂಗ್ಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ 104 ರನ್ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ, 2ನೇ ಪಂದ್ಯದಲ್ಲಿ ಪಾಕ್ ವಿರುದ್ಧ 14 ರನ್ಗಳ ಸೋಲು ಅಭವಿಸಿದ್ದು, ಬಾಂಗ್ಲಾ ವಿರುದ್ಧ 106 ರನ್ಗಳ ಬೃಹತ್ ಜಯ ದಾಖಲಿಸಿದೆ.
ಬ್ಯಾರ್ಸ್ಟೋವ್, ಜಾಸನ್ ರಾಯ್ ಹಾಗೂ ಜೋ ರೂಟ್ ಆರಂಭದಲ್ಲಿ ಅಬ್ಬರಿಸಿದರೆ, ಮಾರ್ಗನ್, ಬೆನ್ಸ್ಟೋಕ್ಸ್ ಹಾಗೂ ಬಟ್ಲರ್ ಉತ್ತಮ ಬ್ಯಾಟಿಂಗ್ ಟಚ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ವೋಕ್ಸ್, ಮಾರ್ಕ್ವುಡ್, ಜೋಫ್ರಾ ಆರ್ಚರ್ರಂತ ಮಾರಕ ವೇಗಿಗಳ ಜೊತೆಗೆ ಮೊಯಿನ್ ಅಲಿ, ಆದಿಲ್ ರಶೀದ್ರಂತಹ ಸ್ಪಿನ್ ಬೌಲಿಂಗ್ ಶಕ್ತಿ ಕೂಡ ಆಂಗ್ಲರಿಗಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆದ್ದಿದ್ದ ಕೆರಿಬಿಯನ್ನರು, ದ್ವಿತೀಯ ಪಂದ್ಯದಲ್ಲಿ ಸಣ್ಣ ಅಂತರದಿಂದ ಆಸೀಸ್ ವಿರುದ್ಧ ಸೋಲನುಭವಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದು, 3 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.