ಕರ್ನಾಟಕ

karnataka

ETV Bharat / briefs

ಆಂಗ್ಲರಿಗೆ ಸವಾಲಾಗದ ಆಫ್ರಿಕನ್ನರು... ಇಂಗ್ಲೆಂಡ್​ ತಂಡಕ್ಕೆ ಭರ್ಜರಿ ಜಯ - ಇಂಗ್ಲೆಂಡ್​

ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಅದ್ದೂರಿ ಪ್ರದರ್ಶನ ತೋರಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ವಿರುದ್ಧ 104 ರನ್​ಗಳಿಂದ ಜಯ ಸಾಧಿಸಿದೆ.

icc

By

Published : May 30, 2019, 10:33 PM IST

Updated : May 30, 2019, 10:49 PM IST

ಲಂಡನ್:12ನೇ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಅದ್ಧೂರಿ ಪ್ರದರ್ಶನ ತೋರಿದ ಇಂಗ್ಲೆಂಡ್​ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್​ಗಳಿಂದ ಜಯ ಸಾಧಿಸಿದೆ.

312 ರನ್​ಗಳ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ತಂಡ 39.5 ಓವರ್​ಗಳಲ್ಲೇ ಆಲೌಟ್​ ಆಗುವ ಮೂಲಕ 104 ರನ್​ಗಳ ಅಂತರದ ಸೋಲುಕಂಡಿತು.

ಆರಂಭಿಕರಾಗಿ ಕ್ವಿಂಟನ್​ ಡಿಕಾಕ್(68)​ ಹಾಗೂ ವ್ಯಾನ್​ ಡರ್(50) ರನ್ ​ಗಳಿಸಿದ್ದು ಬಿಟ್ಟರೆ ಆಫ್ರಿಕಾ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್​ ಬೌಲರ್​ಗಳ ಮುಂದೆ ನಿಲ್ಲದೇ ಪೆವಿಲಿಯನ್​ ಹಾದಿ ಹಿಡಿದರು. ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಡು ಪ್ಲೆಸಿಸ್​(5), ಐಡೆನ್​ ಮ್ಯಾಕ್ರಮ್​ (11), ಡುಮಿನಿ(8), ಪ್ರೆಟೋರಿಯಸ್​(1) ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿ ಆಫ್ರಿಕನ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

3ನೇ ಓವರ್​ನಲ್ಲೇ ಗಾಯಗೊಂಡು ನಿವೃತ್ತಿಗೊಂಡಿದ್ದ ಆಮ್ಲ ಮತ್ತೆ ಬ್ಯಾಟಿಂಗ್​ಗೆ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇವಲ 13 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಪೆಹ್ಲುಕ್ವಾಯೋ(24), ರಬಾಡಾ (11) ಎಂಗಿಡಿ 6 ರನ್ ​ಗಳಿಸಿದರು.

ಉತ್ತಮ ಬೌಲಿಂಗ್​ ದಾಳಿ ನಡೆಸಿದ ಇಂಗ್ಲೆಂಡ್​ ತಂಡದ ಬೌಲರ್​ಗಳು ಇನ್ನೂ 61 ಎಸೆತಗಳು ಇರುವಂತೆಯೇ ಎದುರಾಳಿಯನ್ನು ಅಲೌಟ್​ ಮಾಡಿದರು. ಯುವ ವೇಗಿ ಆರ್ಚರ್​ 3, ಪ್ಲಂಕೇಟ್ 2​, ಬೆನ್​ ಸ್ಟೋಕ್ಸ್​ 2, ಅದಿಲ್​ ರಶೀದ್​ ಹಾಗೂ ಮೊಯಿನ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Last Updated : May 30, 2019, 10:49 PM IST

ABOUT THE AUTHOR

...view details