ಕರ್ನಾಟಕ

karnataka

ETV Bharat / briefs

ಒಂದೂವರೆ ವರ್ಷದ ಬಳಿಕ ಸೆರೆಯಿಂದ 'ಮಿಟ್ಟು' ಬಿಡುಗಡೆ.. ಪೆರೋಲ್​ ಮೇಲೆ ಹೊರ ಬರುತ್ತಿರುವ ಗಜರಾಜ!!

ಮಿಟ್ಟುವಿನ ನಾಲ್ಕು ಕಾಲುಗಳಿಗೆ ಕಬ್ಬಿಣದ ದಪ್ಪ ಸರಪಳಿಗಳನ್ನು ಕಟ್ಟಲಾಗಿದೆ. ನೋಡಲು ಇದು ತೀರಾ ಅಮಾನವೀಯ ಚಿತ್ರಣ. ಆದ್ರೆ, ಘಟನೆಯ ಕೆಲ ದಿನಗಳ ಬಳಿಕ ಮಾವುತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ..

elephant
elephant

By

Published : May 15, 2021, 4:16 PM IST

Updated : May 15, 2021, 4:38 PM IST

ವಾರಣಾಸಿ(ಉತ್ತರ ಪ್ರದೇಶ):ಕಳೆದ ಒಂದೂವರೆ ವರ್ಷದಿಂದ ಕೊಲೆ ಶಿಕ್ಷೆ ಅನುಭವಿಸುತ್ತಾ ಜೈಲು ವಾಸದಲ್ಲಿರುವ ಮಿಟ್ಟು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ ಎಂಬ ಸುದ್ದಿ ಹರಿದಾಡಿದೆ.

ರಾಮ್‌ನಗರ್ ವನ್ಯಜೀವಿ ಸಂರಕ್ಷಣೆಯ ಮೇಲ್ವಿಚಾರಣೆಯಲ್ಲಿ ಒಂದೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಕೊಲೆ ಶಿಕ್ಷೆ ಅನುಭವಿಸುತ್ತಿರುವ ಮಿಟ್ಟು ಎಂಬ ಆನೆ ಶೀಘ್ರದಲ್ಲೇ ಬಿಡುಗಡೆಯಾಗಬಹುದು.

ಜೈಲುವಾಸದಲ್ಲಿರುವ ಮಿಟ್ಟು ಸರಪಳಿಂದ ಬಂದಿಸಲ್ಪಟ್ಟಿದ್ದಾನೆ. ಆತನ ನೋವನ್ನು ಅರಿತ ವ್ಯಕ್ತಿಯೋರ್ವ ಟ್ವಿಟರ್​ ಮೂಲಕ ಪೊಲೀಸ್​ ಆಯುಕ್ತರಿಗೆ ಸುದ್ದಿ ಮುಟ್ಟಿಸಿ ಆತನ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ವಾರಣಾಸಿ ಪೊಲೀಸ್ ಆಯುಕ್ತ ಎ ಸತೀಶ್ ಗಣೇಶ್​ ಮಾಹಿತಿ ಪಡೆದು, ಅವರು ಮೃಗಾಲಯದ ನಿರ್ದೇಶಕ ರಮೇಶ್ ಪಾಂಡೆ ಅವರೊಂದಿಗೆ ಮಾತನಾಡಿದ್ದಾರೆ.

ಪೆರೋಲ್​ ಮೇಲೆ ಹೊರ ಬಂದ ಗಜರಾಜ

ಮಿಟ್ಟುನನ್ನು ಆದಷ್ಟು ಬೇಗ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಆನೆಯನ್ನು ವಾರಣಾಸಿ ಜಿಲ್ಲೆಯ ರಾಮನಗರ ವನ್ಯಜೀವಿ ಪ್ರದೇಶದಲ್ಲಿ ಸರಪಳಿಗಳಲ್ಲಿ ಬಂಧಿಸಿ ಇರಿಸಲಾಗಿತ್ತು.

ಅಂದು ನಡೆದಿದ್ದು..

ಈ ಪ್ರಕರಣವು 2019ರಲ್ಲಿ ಚಂದೌಲಿ ಜಿಲ್ಲೆಯಲ್ಲಿ ನಡೆದುದಾಗಿದೆ. ಅಂದ್ರೆ ಸರಿಸುಮಾರು ಒಂದೂವರೆ ವರ್ಷದ ಹಿಂದೆ ಮಿಟ್ಟು ರಾಮಶಂಕರ್ ಎಂಬ ವ್ಯಕ್ತಿಯನ್ನು ಕೊಂದಿತ್ತು. ರಾಮಶಂಕರ್ ಅವರ ಕುಟುಂಬವು ಬಾಬುರಿ ಪೊಲೀಸ್ ಠಾಣೆಯಲ್ಲಿ ಆನೆ ಮತ್ತು ಮಾವುತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿತ್ತು. ಪ್ರಕರಣ ಕುರಿತಾಗಿ ಆನೆ ಮತ್ತು ಮಾವುತ ಇಬ್ಬರನ್ನೂ ಬಂಧಿಸಲಾಗಿತ್ತು.

ಮಾವುತನನ್ನು ಜೈಲಿಗೆ ಕಳುಹಿಸಿ, ಆನೆಯನ್ನು ವಾರಣಾಸಿಯ ರಾಮ್‌ನಗರದಲ್ಲಿರುವ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಯಿತು. ಅಂದಿನಿಂದಲೂ ಅದು ಸರಪಳಿಗಳಲ್ಲೇ ದಿನ ದೂಡುತ್ತಿದೆ.

ಮಿಟ್ಟುವಿನ ನಾಲ್ಕು ಕಾಲುಗಳಿಗೆ ಕಬ್ಬಿಣದ ದಪ್ಪ ಸರಪಳಿಗಳನ್ನು ಕಟ್ಟಲಾಗಿದೆ. ನೋಡಲು ಇದು ತೀರಾ ಅಮಾನವೀಯ ಚಿತ್ರಣ. ಆದ್ರೆ, ಘಟನೆಯ ಕೆಲ ದಿನಗಳ ಬಳಿಕ ಮಾವುತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.

ಆದ್ರೆ, ಆನೆ ಇನ್ನೂ ಸೆರೆವಾಸ ಅನುಭವಿಸುತ್ತಿದೆ. ಆನೆಯ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತಾದರೂ ಕೊರೊನಾ ಲಾಕ್​ಡೌನ್​ ಕಾರಣ ವಿಚಾರಣೆ ಮುಂದೂಡಲ್ಪಟ್ಟಿತ್ತು.

ವನ್ಯಜೀವಿ ಸಂರಕ್ಷಣಾ ಇಲಾಖೆ ಕಳೆದ ಒಂದೂವರೆ ವರ್ಷಗಳಿಂದ ಆನೆಗಳನ್ನು ನೋಡಿಕೊಳ್ಳುತ್ತಿದ್ದು, ದಿನಕ್ಕೆ 1000 ರೂಪಾಯಿ ವೆಚ್ಚವಾಗುತ್ತಿದೆ.

ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಆನೆಗೆ ಬಿಡುಗಡೆ ಭಾಗ್ಯ ಸಿಗಬಹುದು ಎಂಬ ಭರವಸೆ ಈಗ ಹೆಚ್ಚಾಗಿದೆ. ಶೀಘ್ರದಲ್ಲೇ ಆನೆ ಆನೆಯನ್ನು ವಾರಣಾಸಿಯಿಂದ ದುಧ್ವಾ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಬಹುದು ಎಂದು ನಂಬಿದ್ದಾರೆ ಅರ್ಜಿದಾರರು.

Last Updated : May 15, 2021, 4:38 PM IST

ABOUT THE AUTHOR

...view details