ವಿದ್ಯುತ್ ಅವಘಡ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ - ಕೋಲಾರ ವಿದ್ಯುತ್ ಅವಘಡ
ಜಮೀನಿನಲ್ಲಿ ಪಂಪ್ ಹಾಗೂ ಮೋಟಾರ್ ಎತ್ತುವಾಗ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
![ವಿದ್ಯುತ್ ಅವಘಡ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ Electrical short circuit in kolar district](https://etvbharatimages.akamaized.net/etvbharat/prod-images/768-512-02:18-kn-klr-2-power-death-av-7205620-13062020134313-1306f-1592035993-378.jpg)
ಕೋಲಾರ:11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸೀಪೂರ ಗ್ರಾಮದಲ್ಲಿ ಜರುಗಿದೆ.
ರವಿಕುಮಾರ್ (51) ಮೃತ ದುರ್ದೈವಿ. ಜೊತೆಗಿದ್ದ ನಾರಾಯಣಸ್ವಾಮಿ, ಚನ್ನಪ್ಪ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೀಪೂರ ಗ್ರಾಮದ ಕೃಷ್ಣಪ್ಪ ಎಂಬುವರ ತೋಟದಲ್ಲಿ ಪಂಪ್ ಹಾಗೂ ಮೋಟಾರ್ ಮೇಲೆತ್ತುವ ವೇಳೆ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾಸಕ ಕೆ.ಶ್ರೀನಿವಾಸಗೌಡ ಗ್ರಾಮಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.