ನವದೆಹಲಿ:ಲೋಕಸಭಾ ಚುನಾವಣೆ ಹಂತಕ್ಕೆ ಬಂದಿದ್ದು, ಟ್ವಿಟ್ಟರ್ನಲ್ಲಿ ಸದ್ಯ ಇರುವ ಎಲ್ಲ ಚುನಾವಣೋತ್ತರ ಸಮೀಕ್ಷೆಗಳ ಕುರಿತಾದ ಟ್ವೀಟ್ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗ ಟ್ವಿಟ್ಟರ್ ಇಂಡಿಯಾಗೆ ಸೂಚಿಸಿದೆ.
ಚುನಾವಣೋತ್ತರ ಸಮೀಕ್ಷೆಗಳನ್ನು ತೆಗೆದುಹಾಕಿ: ಟ್ವಿಟ್ಟರ್ಗೆ ಚುನಾವಣಾ ಆಯೋಗ ಸೂಚನೆ - ಟ್ವಿಟರ್ ಇಂಡಿಯಾ
ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಅದೇ ದಿನ ಚುನಾಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಇದಕ್ಕೆ ಬ್ರೇಕ್ ಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಟ್ವಿಟ್ಟರ್ಗೆ ಸೂಚಿಸಿದೆ.
![ಚುನಾವಣೋತ್ತರ ಸಮೀಕ್ಷೆಗಳನ್ನು ತೆಗೆದುಹಾಕಿ: ಟ್ವಿಟ್ಟರ್ಗೆ ಚುನಾವಣಾ ಆಯೋಗ ಸೂಚನೆ](https://etvbharatimages.akamaized.net/etvbharat/prod-images/768-512-3294530-thumbnail-3x2-ks.jpg)
ಚುನಾವಣಾ ಆಯೋಗ
ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಅದೇ ದಿನ ಚುನಾಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಈ ಕುರಿತುಚುನಾವಣಾ ಆಯೋಗಕ್ಕೆ ದೂರು ಬಂದಿದೆ. ಹೀಗಾಗಿ ಟ್ವಿಟ್ಟರ್ ಇಂಡಿಯಾಗೆ ಪ್ರಸ್ತುತ ಇರುವ ಚುನಾಣೋತ್ತರ ಸಮೀಕ್ಷೆಗಳ ಟ್ವೀಟ್ ಅನ್ನು ತೆಗೆದುಹಾಕುವಂತೆ ಆಯೋಗ ತಾಕೀತು ಮಾಡಿದೆ.
ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 23ರಂದು ಬಹುನಿರೀಕ್ಷಿತ ಫಲಿತಾಂಶ ಹೊರಬೀಳಲಿದೆ.