ನವದೆಹಲಿ: ಲೋಕಸಭೆಗಾಗಿ ಇಂದು 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗಾಗಿ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಎಲ್ಲ ರಾಜ್ಯಗಳಿಂದ ಸೇರಿ ಶೇ.64ರಷ್ಟು ವೋಟಿಂಗ್ ಆಗಿದೆ.
ಮಹಾರಾಷ್ಟ್ರದ 17, ರಾಜಸ್ಥಾನದ 13, ಉತ್ತರಪ್ರದೇಶದ 13, ಪಶ್ಚಿಮ ಬಂಗಾಳದ 8, ಮಧ್ಯಪ್ರದೇಶದ 6, ಒಡಿಶಾದ 6, ಬಿಹಾರದ 5, ಜಾರ್ಖಂಡದ 3 ಹಾಗೂ ಜಮ್ಮು & ಕಾಶ್ಮೀರದ ಒಂದು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಒಟ್ಟು 961 ಅಭ್ಯರ್ಥಿಗಳ ಭವಿಷ್ಯ ವಿವಿಪ್ಯಾಟ್ನಲ್ಲಿ ಭದ್ರವಾಗಿದೆ.
ಚುನಾವಣಾ ಆಯೋಗ ತಿಳಿಸಿರುವ ಪ್ರಕಾರ ಉತ್ತರಪ್ರದೇಶದಲ್ಲಿ ಶೇ.57.58, ಪಶ್ಚಿಮ ಬಂಗಾಳದಲ್ಲಿ ಶೇ.76.44,ಜಾರ್ಖಂಡ್ನಲ್ಲಿ ಶೇ.63.39, ಮಧ್ಯಪ್ರದೇಶ ಶೇ.65.77, ರಾಜಸ್ಥಾನ ಶೇ.64.48,ಜಮ್ಮು-ಕಾಶ್ಮೀರ್ ಶೇ.10.5,ಮಹಾರಾಷ್ಟ್ರ ಶೇ. 55. 88, ಒಡಿಶಾ ಶೇ. 64. 05 ಹಾಗೂ ಬಿಹಾರದಲ್ಲಿ ಶೇ. 58. 92ರಷ್ಟು ವೋಟಿಂಗ್ ಆಗಿದೆ.
2014ಕ್ಕೆ ಹೋಲಿಕೆ ಮಾಡಿದಾಗ ಈ ಸಲ ದಾಖಲೆಯ ಮತದಾನವಾಗಿದೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಮಹಾರಾಷ್ಟ್ರದ ಮುಂಬೈ ಉತ್ತರ ಕ್ಷೇತ್ರದಲ್ಲಿ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಸಲ್ಮಾನ್ ಖಾನ್, ಶಾರೂಖ್ ಖಾನ್, ವಿವೇಕ್ ಒಬೆರಾಯ್, ಕ್ರಿಕೆಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ಪ್ರಮುಖರು ಮತದಾನ ಮಾಡಿದರು.