ಕರ್ನಾಟಕ

karnataka

ETV Bharat / briefs

ಬೆಂಕಿಯುಂಡೆ ಭಾರತ! ಗರಿಷ್ಠ ತಾಪಮಾನ.. ವಿಶ್ವದ 15 ನಗರಗಳಲ್ಲಿ ಇಂಡಿಯಾದ್ದೇ ಸಿಂಹಪಾಲು.. - ಭಾರತ

ಹವಾಮಾನ ಪರಿವೀಕ್ಷಣಾ ಸಂಸ್ಥೆ ಎಲ್​ ಡೊರಾಡೋ ನೀಡಿರುವ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ಹೊಂದಿರುವ 15 ನಗರಗಳಲ್ಲಿ ಭಾರತ 8 ನಗರಗಳು ಸೇರಿವೆ.

ಭಾರತ

By

Published : Jun 3, 2019, 4:30 PM IST

ನವದೆಹಲಿ:ಈ ಬಾರಿಯ ಬೇಸಿಗೆಯಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ಹಿಂದೆಂದಿಗಿಂತಲೂ ತೀವ್ರವಾಗಿ ಏರಿಕೆಯಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಸದ್ಯದ ವರದಿ ಇಲ್ಲಿದೆ.

ಹವಾಮಾನ ಪರಿವೀಕ್ಷಣಾ ಸಂಸ್ಥೆ ಎಲ್​ ಡೊರಾಡೋ ನೀಡಿರುವ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ಹೊಂದಿರುವ 15 ನಗರಗಳಲ್ಲಿ ಭಾರತ 8 ನಗರಗಳು ಸೇರಿವೆ.ಭಾರತದ ಎಂಟು ನಗರ ಹೊರತುಪಡಿಸಿ ಪಾಕಿಸ್ತಾನದ ಕೆಲ ನಗರಗಳಿವೆ. ರಾಜಸ್ಥಾನದ ಚುರು(48.9 ಡಿಗ್ರಿ ಸೆಲ್ಸಿಯಸ್) ಭಾರತದಲ್ಲೇ ಗರಿಷ್ಠ ತಾಪಮಾನ ದಾಖಲಾದ ನಗರವಾಗಿದೆ ಎಂದು ಎಲ್​ ಡೊರಾಡೋ ಹೇಳಿದೆ.

ಚುರು ನಗರದಲ್ಲಿ ರಸ್ತೆಯ ಮೇಲೆ ನೀರನ್ನು ಸಿಂಪಡಿಸಿ ತಾಪಮಾನವನ್ನು ಹತೋಟಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿ ಬಿಸಿಗಾಳಿಯ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ 45ರ ಗಡಿ ದಾಟಿದೆ. ಆಹಾರ ವಿತರಣಾ ಸಂಸ್ಥೆಗಳಾದ ಜೊಮ್ಯಾಟೋ ತಮ್ಮ ಸಿಬ್ಬಂದಿಗಳಿಗೆ ಆಹಾರವನ್ನು ತಲುಪಿಸಿದ ವೇಳೆ ನೀರನ್ನು ನೀಡಿ ಸತ್ಕರಿಸಿ ಎಂದು ಗ್ರಾಹಕರಲ್ಲಿ ಮನವಿ ಮಾಡಿದೆ. ದಕ್ಷಿಣದ ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ತಾಪಮಾನ ಅಧಿಕವಾಗಿದೆ. ಕಳೆದ ಮೂರು ವಾರದಲ್ಲಿ ಸುಮಾರು 17 ಮಂದಿ ಬಿಸಿಲು ಹಾಗೂ ಬಿಸಿಗಾಳಿಯ ಪರಿಣಾಮ ಸಾವನ್ನಪ್ಪಿದ್ದಾರೆ.

ಜೂನ್​ 6ರಂದು ಮುಂಗಾರು ಆಗಮನ:

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜೂನ್ 6ರಂದು ದಕ್ಷಿಣದ ರಾಜ್ಯಗಳಲ್ಲಿ ಆಗಮನವಾಗಲಿದೆ ಎಂದಿದೆ. ಮುಂಗಾರು ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎನ್ನುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ABOUT THE AUTHOR

...view details