ಕರ್ನಾಟಕ

karnataka

ETV Bharat / briefs

ಆಯೋಗ ದೂರಿದ ವಿಪಕ್ಷಗಳು... 'ಕುಣಿಲಾರದವರು ನೆಲ ಡೊಂಕು' ಅಂದ್ರು ಪ್ರಣಬ್​...!

ದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಣಿಯಲಾರದವಳು ನೆಲ ಡೊಂಕು ಎನ್ನುತ್ತಾಳೆ. (ಇಂಗ್ಲಿಷ್​ ಗಾದೆ: only a poor workman blames his tools) ಅದೇ ರೀತಿ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಪ್ರತಿ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಣಬ್​

By

Published : May 21, 2019, 12:08 PM IST

ನವದೆಹಲಿ:ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರೇ ಅಪಸ್ವರ ಎತ್ತಿರುವ ವೇಳೆಯಲ್ಲಿ ಇಸಿ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂದು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್​ ನಾಯಕ ಪ್ರಣಬ್​ ಮುಖರ್ಜಿ ಹೇಳಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಣಿಯಲಾರದವಳು ನೆಲ ಡೊಂಕು ಎನ್ನುತ್ತಾಳೆ. (ಇಂಗ್ಲಿಷ್​ ಗಾದೆ: only a poor workman blames his tools) ಅದೇ ರೀತಿ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಪ್ರತಿ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದಶಕಗಳ ಹಿಂದೆ ಸ್ಥಾಪಿಸಲಾಗಿರುವ ಸರ್ಕಾರಿ ಸಂಸ್ಥೆಗಳು ಪರಿಪಕ್ವವಾಗಿ ಕೆಲಸ ಮಾಡುತ್ತಿವೆ. ಅವನ್ನು ಟೀಕಿಸುವ ಬದಲು ನಾವು ಏನು ಮಾಡಿದ್ದೇವೆ ಎಂಬುದನ್ನು ನೋಡಿಕೊಳ್ಳಬೇಕು. ಯಾವಾಗಲು ಒಬ್ಬ ಕೆಟ್ಟ ಕೆಲಸಗಾರ ಮಾತ್ರ ತನಗೆ ಕೊಟ್ಟಿರುವ ಪರಿಕರಗಳ ಮೇಲೆ ದೂರುತ್ತಾನೆ. ಒಳ್ಳೆಯ ಕೆಲಸಗಾರ ತಂತಾನೆ ಕೆಲಸ ಮಾಡಿಕೊಂಡು ಹೋಗುತ್ತಾನೆ.

ನಾವು ಸಂಸ್ಥೆಗಳನ್ನು ಗಟ್ಟಿಗೊಳಿಸಬೇಕು ಎಂದರೆ ಅವು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ನಂಬಬೇಕು. ಸುಕುಮಾರ್​ ಸೇನ್​ ಅವರಿಂದ ಹಿಡಿದು ಈಗಿನ ಚುನಾವಣಾ ಆಯೋಗದ ಮುಖ್ಯಸ್ಥರವರೆಗೂ ಎಲ್ಲರೂ ಸರಿಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ನೆಲೆಗಳಲ್ಲೇ ಅವರನ್ನು ನೇಮಕ ಮಾಡಲಾಗಿರುವುದು ಇದಕ್ಕೆ ಕಾರಣ ಎಂದು ಮುಖರ್ಜಿ ಅವರು ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳ ನಾಯಕರ ಹೇಳಿಕೆಗೆ ಟಾಂಗ್​ ಕೊಟ್ಟರು. ರಾಹುಲ್​ ಗಾಂಧಿ ಅವರು ಪ್ರತೀ ಸಮಾವೇಶದಲ್ಲೂ ಇಸಿ ನಡೆ ಬಗ್ಗೆ ಗರಂ ಆಗುತ್ತಿದ್ದರು.

ABOUT THE AUTHOR

...view details