ನವದೆಹಲಿ:ಮುಸ್ಲಿಮರ ಪವಿತ್ರ ಮಾಸ ರಂಜಾನ್ ವೇಳೆ ಮತದಾನದ ಸಮಯವನ್ನು ಬದಲಿಸಬೇಕು ಎನ್ನುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ರಂಜಾನ್ ಉಪವಾಸ ನಾಳೆಯಿಂದ ಆರಂಭವಾಗುತ್ತಿದೆ. ಲೋಕಸಭಾ ಚುನಾವಣೆಯ ಐದನೇ ಹಂತದ ಚುನಾವಣೆ ಸಹ ನಾಳೆಯೇ ನಡೆಯಲಿದೆ. ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.