ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟೀಂ ಇಂಡಿಯಾದ ಮಾಜಿ ಪ್ಲೇಯರ್ ಗಂಭೀರ್ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ.
ಎರಡು ಕಡೆ ವೋಟರ್ ಐಡಿ: ಗಂಭೀರ್ ಮೇಲೆ ಕೇಸ್ ಹಾಕಿದ ಆಪ್ ಅಭ್ಯರ್ಥಿ - ಕ್ರಿಮಿನಲ್ ಕೇಸ್
ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಎರಡು ವೋಟರ್ ಐಡಿ ಹೊಂದಿದ್ದಾರೆ ಎಂದು ಆಪ್ ಅಭ್ಯರ್ಥಿ ಅತಿಶ್ ದೂರು ನೀಡಿದ್ದಾರೆ.
ಗಂಭೀರ್ ದೆಹಲಿಯ ಕರೋಲ್ ಬಾಗ್ ಮತ್ತು ರಾಜಿಂದರ್ ನಗರ್ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಹಾಗಾಗಿ ಅವರ ಸ್ಪರ್ಧೆಯನ್ನ ಅನರ್ಹಗೊಳಿಸಬೇಕೆಂದು ಆಪ್ ಅಭ್ಯರ್ಥಿ ಅತಿಶಿ ಮರ್ಲೇನಾ ಒತ್ತಾಯಿಸಿದ್ದಾರೆ. ಐಪಿಸಿ ಸೆಕ್ಷನ್ 17, 31 ಹಾಗೂ 125 A ಪ್ರಕಾರ ದೂರು ದಾಖಲು ಮಾಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರ್ ವಿರುದ್ಧ ದೆಹಲಿಯ ತೀಸ್ ಹಜಾರಿ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಕಾರಣ ಅವರಿಗೆ ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.