ಕರ್ನಾಟಕ

karnataka

ETV Bharat / briefs

ತೈಲ ಬೆಲೆ ಏರಿಕೆಗೆ ಆಕ್ರೋಶ : ಜೀಪ್​ಗೆ ಹಗ್ಗ ಕಟ್ಟಿ ಎಳೆದು ಸಾಂಕೇತಿಕ ಪ್ರತಿಭಟನೆ - ಡಿವೈಎಫ್​ಐ ಸಂಘಟನೆ ಪ್ರತಿಭಟನೆ ಸುದ್ದಿ

ದೇಶದಲ್ಲಿನ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಡಿವೈಎಫ್​ಐ ಸಂಘಟನೆ ಬಂಟ್ವಾಳದ ಮಂಗಳಪದವಿನಲ್ಲಿ ಪ್ರತಿಭಟನೆ ನಡೆಸಿದೆ..

DYFI organisation
DYFI organisation

By

Published : Jun 15, 2021, 4:42 PM IST

Updated : Jun 15, 2021, 5:02 PM IST

ಬಂಟ್ವಾಳ :ಜೀಪ್​ಗೆ ಹಗ್ಗ ಕಟ್ಟಿ ಎಳೆದು ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಮಂಗಳಪದವು ಪೆಟ್ರೋಲ್ ಪಂಪ್ ಮುಂಭಾಗ ಡಿವೈಎಫ್​ಐ ಮಂಗಳವಾರ ಪ್ರತಿಭಟನೆ ನಡೆಸಿತು.

ಸಿಪಿಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಈ ಸಂದರ್ಭದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ನಡೆಯಬೇಕು ಎಂದರು.

ಜೀಪ್​ಗೆ ಹಗ್ಗ ಕಟ್ಟಿ ಎಳೆದು ಸಾಂಕೇತಿಕ ಪ್ರತಿಭಟನೆ

ಡಿವೈಎಫ್ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ರಝಾಕ್ ಕೆಲಿಂಜ , ಡಿವೈಎಫ್ಐ ವಿಟ್ಲ ವಲಯ ಸಮಿತಿ ಮುಖಂಡರಾದ ಸಲೀಂ ಮಲಿಕ್, ಸಲ್ಮಾನ್ ಪಿ.ಬಿ,ಜಮೀಲ್, ಇರ್ಫಾನ್ ಇಬ್ರಾಹಿಂ ಭಾಸಿಂ ನೇತೃತ್ವವಹಿಸಿದ್ದರು. ಸುಲೈಮಾನ್ ಪೆಲತ್ತಡ್ಕ, ಹನೀಪ್ ಕೆಲಿಂಜ, ಹನೀಪ್ ಆಲಂಗಾರ್, ಸಮೀರ್ ಪಾತ್ರತೋಟ, ಸಾಭಿತ್ ಕೆಲಿಂಜ, ಅಝಿಝ್ ಕೆಳಿಂಜ, ಸಿನಾನ್, ಅಝೀಝ್ ಪೆಲತ್ತಡ್ಕ, ಸವಾದ್ ಕೋಲ್ಪೆ , ಶಾಕೀರ್ ಖಾನ್, ಲಿಯಕತ್ ಖಾನ್, ಮೊಹಿದಿನ್ ಕೆದುಮೂಲೆ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Last Updated : Jun 15, 2021, 5:02 PM IST

ABOUT THE AUTHOR

...view details