ಹೈದರಾಬಾದ್: ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಾವು ಸಲಿಂಗ ಸಂಬಂಧ ಹೊಂದಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.
ಒಡಿಶಾ ರಾಜ್ಯದ ಚಕ ಗೋಪಾಲ್ಪುರ ಮೂಲದ 23 ವರ್ಷದ ದ್ಯುತಿ ಚಾಂದ್ ತಾವು ಸಲಿಂಗ ಸಂಬಂಧದ ಮೂಲಕ ಬಾಳ ಸಂಗಾತಿಯನ್ನು ಕಂಡುಕೊಂಡಿದ್ದು, ಆಕೆ ಸಹ ತನ್ನದೇ ಊರಿನವಳು ಎಂದು ಚಾಂದ್ ತಿಳಿಸಿದ್ದಾರೆ.
"ನಾನು ನನ್ನ ಬಾಳಸಂಗಾತಿಯನ್ನು ಕಂಡುಕೊಂಡಿದ್ದೇನೆ. ಎಲ್ಲರಿಗೂ ಈ ವಿಚಾರದಲ್ಲಿ ತಮ್ಮದೇ ಆದ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಸಲಿಂಗ ಸಂಬಂಧವನ್ನು ಈ ಮೊದಲಿನಿಂದಲೂ ನಾನು ಬೆಂಬಲಿಸುತ್ತಲೇ ಬಂದಿದ್ದೇನೆ. ಪ್ರಸ್ತುತ ನನ್ನ ಗಮನವನ್ನು ವಿಶ್ವ ಚಾಂಪಿಯನ್ಶಿಪ್ ಹಾಗೂ ಒಲಂಪಿಕ್ಸ್ ಗೇಮ್ ಕಡೆಗೆ ಹರಿಸಿದ್ದೇನೆ" ಎಂದು ದ್ಯುತಿ ಚಾಂದ್ ಹೇಳಿದ್ದಾರೆ.
ಸೆಕ್ಷನ್ 377 ಅನ್ನು ತೆರವುಗೊಳಿಸಿದ ಬಳಿಕ ಸಲಿಂಗ ಸಂಬಂಧದಲ್ಲಿರುವುದಾಗಿ ಮೊದಲ ಭಾರತೀಯ ಅಥ್ಲೀಟ್ ದ್ಯುತಿ ಚಾಂದ್ ಆಗಿದ್ದಾರೆ.
ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ತೆರವುಗೊಳಿಸಿ ಸಲಿಂಗ ಸಂಬಂಧವನ್ನು ಭಾರತದಲ್ಲಿ ಮಾನ್ಯ ಮಾಡಿತ್ತು.