ಹಾಸನ: ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಇನ್ನು ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯೋರ್ವ ಅವಾಂತರ ಸೃಷ್ಠಿ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ದೇಶಕ್ಕೆ ಮೋದಿ ಬೇಕು... ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯ ರಂಪಾಟ - ಕುಡಿದ ಮತ್ತು
ಕಂಠಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿವೋರ್ವ ನಡುರಸ್ತೆಯಲ್ಲೇ ರಂಪಾಟ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಮೋದಿಯವರಿಗೆ ಮತ ಹಾಕುವಂತೆ ವಾಹನ ತಡೆದು ರಂಪಾಟ ಮಾಡಿದ್ದಾನೆ.
![ದೇಶಕ್ಕೆ ಮೋದಿ ಬೇಕು... ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯ ರಂಪಾಟ](https://etvbharatimages.akamaized.net/etvbharat/images/768-512-2801392-861-ecd5db2e-9e0b-4607-bb1c-f85001e5909c.jpg)
ಬಿಜೆಪಿ ಅಭಿಮಾನಿವೋರ್ವ ಇಲ್ಲಿನ ಬಿ.ಎಂ.ರಸ್ತೆ ನಡುವೆ ನಿಂತು ಮೋದಿ, ಮೋದಿ ಎಂದು ವಾಹನಗಳನ್ನ ಅಡ್ಡಗಟ್ಟಿ ಅವಾಂತರ ಸೃಷ್ಟಿಸಿದ್ದಾನೆ. ಕುಡಿದ ಮತ್ತಿನಲ್ಲಿ ರಸ್ತೆ ನಡುವೆ ನಿಂತು ವಾಹನಗಳನ್ನು ಅಡ್ಡಗಟ್ಟಿ ಮೋದಿಗೆ ಮತ ಹಾಕಬೇಕು.ದೇಶಕ್ಕೆ ಮೋದಿ ಬೇಕು ಎಂದು ಸುಮಾರು 15 ನಿಮಿಷಗಳ ಕಾಲ ರಂಪಾಟ ನಡೆಸಿದ್ದಾನೆ.
ಇದೇ ವೇಳೆ ಪೊಲೀಸ್ ವಾಹನವನ್ನ ಈತ ಅಡ್ಡಗಟ್ಟಿದ್ದರೂ ಅದರಲ್ಲಿದ್ದ ಸಿಬ್ಬಂದಿ ನಮಗೇಕೆ ಎಂದು ಸುಮ್ಮನೆ ಹೋಗಿದ್ದಾರೆ. ಈತ ವಾಹನ ಸವಾರರು ಕೆಲ ಸಮಯ ಕಿರಿಕಿರಿ ಅನುಭವಿಸಿದರೆ, ಕೆಲವರು ಪುಕ್ಕಟೆ ಮನರಂಜನೆ ಪಡೆದುಕೊಂಡರು. ಕೊನೆಯದಾಗಿ ಆತನ ಸ್ನೇಹಿತರು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.