ರಾಯಚೂರು:ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಯ ಭಕ್ತರಿಗೆ ಬರದ ಬಿಸಿ ತಟ್ಟುತ್ತಿದೆ. ನಿತ್ಯ ದರ್ಶನಕ್ಕೆಂದು ಬರುವ ಸಾವಿರಾರು ಭಕ್ತರ ಸ್ನಾನ, ಪೂಜೆ, ಪುನಸ್ಕಾರ ಇತ್ಯಾದಿ ಕಾರ್ಯಗಳಿಗೆ ತುಂಗಾ ನದಿ ಆಸರೆಯಾಗಿತ್ತು.
ರಾಯರ ಭಕ್ತರಿಗೂ ತಟ್ಟಿದ ಬರದ ಬಿಸಿ - ಬರ
ಮಂತ್ರಾಲಯದ ರಾಘವೇಂದ್ರ ದರ್ಶನಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ. ತುಂಗಾ ನದಿಯು ಬರಿದಾಗಿದ್ದು, ಸ್ನಾನಕ್ಕೆ ತೊಂದರೆ ಉಂಟಾಗಿದೆ. ಇಷ್ಟಾದರೂ ಆಡಳಿತ ಮಂಡಳಿ ಗಮನಹರಿಸಿಲ್ಲ ಎಂಬುದು ಭಕ್ತರ ಬೇಸರಕ್ಕೂ ಕಾರಣವಾಗಿದೆ.
ಬರಗಾಲದಿಂದಾಗಿ ತುಂಗಾ ನದಿ ಬರಿದಾಗಿದ್ದು, ಭಕ್ತರು ಕೊಠಡಿಗಳಲ್ಲೆ ಸ್ನಾನ ಮುಗಿಸಿ ರಾಯರ ದರ್ಶನಕ್ಕೆ ಹೋಗುವಂತಾಗಿದೆ. ಇಲ್ಲಿನ ಆಡಳಿತ ಮಂಡಳಿಯು ಭಕ್ತರಿಗೆ ಸೂಕ್ತ ನೀರಿನ ವ್ಯವಸ್ಥೆ ಮಾಡಿಲ್ಲ ಎಂಬುದು ಸಾರ್ವಜನಿಕರ ಬೇಸರಕ್ಕೂ ಕಾರಣವಾಗಿದೆ.
ಹೌದು.. ತುಂಗಭದ್ರಾ ನದಿಯಲ್ಲಿ ನೀರು ಬತ್ತಿ ಹೋದ ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ. ದೇಶದ ನಾನಾ ಮೂಲೆಗಳಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಆಗಮಿಸುತ್ತಾರೆ. ಮಂತ್ರಾಲಯಕ್ಕೆ ಬರುವ ಭಕ್ತರು ದೇವಾಲಯದ ಪಕ್ಕದಲ್ಲಿರುವ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ಸನ್ನಿಧಿಗೆ ಬರುವುದು ರೂಢಿಯಾಗಿದೆ. ಆದರೆ ತುಂಗಾ ನದಿಯಲ್ಲಿ ನೀರಿಲ್ಲದೆ, ಬರುವ ಭಕ್ತರಿಗೆ ಪುಣ್ಯ ಸ್ನಾನಕ್ಕೆ ನೀರಿನ ಸಮಸ್ಯೆ ಎದುರಾಗಿದೆ.ಆಡಳಿತ ಮಂಡಳಿ ಇದರತ್ತ ಗಮನ ಹರಿಸಬೇಕು ಎಂಬುದು ಭಕ್ತ ಕೋರಿಕೆಯಾಗಿದೆ.