ಕರ್ನಾಟಕ

karnataka

ETV Bharat / briefs

'ಡ್ರೀಮ್ ಗರ್ಲ್' ರಿಂಕು ಸಿಂಗ್ ನಿಕುಂಬ್ ಕೊರೊನಾಗೆ ಬಲಿ - Dream Gir

ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಂಡ 'ಹಲೋ ಚಾರ್ಲಿ'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟಿ ರಿಂಕು ಸಿಂಗ್​ ಕೊರೊನಾಗೆ ಬಲಿಯಾಗಿದ್ದಾರೆ.

"Dream Girl" Rinku Singh Nikumbh died by corona
"Dream Girl" Rinku Singh Nikumbh died by corona

By

Published : Jun 4, 2021, 9:16 PM IST

Updated : Jun 5, 2021, 9:01 AM IST

ಮುಂಬೈ: ಬಾಲಿವುಡ್ ನಟಿ ರಿಂಕು ಸಿಂಗ್ ನಿಕುಂಬ್ ಕೊರೊನಾದಿಂದ ನಿಧನರಾಗಿದ್ದಾರೆ. ಅವರ ಸೋದರ ಸಂಬಂಧಿ ಚಂದಾ ಸಿಂಗ್ ಈ ಬಗ್ಗೆ ಹೇಳಿದ್ದಾರೆ.

ಮೇ 25ರಂದು ರಿಂಕುಗೆ ಕೋವಿಡ್ ಪಾಸಿಟಿವ್ ಆಗಿತ್ತು. ಮನೆಯಲ್ಲಿ ಒಬ್ಬಳೇ ಇದ್ದ ಅವರಿಗೆ ಜ್ವರ ಕಡಿಮೆಯಾಗುತ್ತಿರಲಿಲ್ಲ. ಈ ಹಿನ್ನೆಲೆ ನಾವು ಅವರನ್ನು ಆಸ್ಪತ್ರೆಗೆ ಸೇರಿಸಿದೆವು. ಐಸಿಯು ಅವಶ್ಯಕತೆ ಇದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಮೊದಲು ಸಾಮಾನ್ಯ ಕೋವಿಡ್ ವಾರ್ಡ್‌ಗೆ ದಾಖಲಿಸಲಾಯಿತು. ಎರಡನೇ ದಿನ ಐಸಿಯುಗೆ ದಾಖಲು ಮಾಡಲಾಯಿತು ಎಂದು ಚಂದಾ ಮಾಹಿತಿ ನೀಡಿದರು.

ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಂಡ 'ಹಲೋ ಚಾರ್ಲಿ'ನಲ್ಲಿ ರಿಂಕು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ಅವರೊಂದಿಗೆ 'ಡ್ರೀಮ್ ಗರ್ಲ್' ಚಿತ್ರದಲ್ಲಿ ನಟಿಸಿದ್ದ ಅವರು ಅಭಿಮಾನಿಗಳ ಗಮನ ಸೆಳೆದಿದ್ದರು.

Last Updated : Jun 5, 2021, 9:01 AM IST

ABOUT THE AUTHOR

...view details