ಕರ್ನಾಟಕ

karnataka

ETV Bharat / briefs

ಇಸ್ರೇಲಿ ಸೇನೆ - ಭಯೋತ್ಪಾದಕರ ನಡುವೆ ವೈಮಾನಿಕ ದಾಳಿ: 12 ಮಂದಿ ನಾಗರಿಕರು ಸಾವು - ಇಸ್ರೇಲಿ ಸೇನೆ ವೈಮಾನಿಕ ದಾಳಿ

ಇಸ್ರೇಲಿ ವೈಮಾನಿಕ ದಾಳಿಯನ್ನು ತೀವ್ರವಾಗಿ ವಿರೋಧಿಸಿದ ಭಯೋತ್ಪಾದಕರು, ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ 250 ಕ್ಕೂ ಹೆಚ್ಚು ರಾಕೆಟ್​ಗಳನ್ನು ಉಡಾಯಿಸಿದ್ದಾರೆ. ಈ ಹಿಂಸಾಚಾರದಲ್ಲಿ ಮಕ್ಕಳನ್ನು ಒಳಗೊಂಡು ಒಟ್ಟು 24 ಪ್ಯಾಲೆಸ್ಟೀನಿ ಜನರು ಕೊಲ್ಲಲ್ಪಟ್ಟಿದ್ದಾರೆ.

isrel
isrel

By

Published : May 11, 2021, 8:55 PM IST

ಗಾಜಾನಗರ(ಇಸ್ರೇಲ್):ಗಾಜಾದಲ್ಲಿ ಭಯೋತ್ಪಾದಕರ ಉಪಟಳಕ್ಕೆ ಬೇಸತ್ತ ಇಸ್ರೇಲ್ ಸೇನೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಪ್ಯಾಲೆಸ್ಟೈನ್ ಗಡಿಯಲ್ಲಿರುವ ದೇಶದ ದಕ್ಷಿಣ ಭಾಗದಲ್ಲಿ ಇನ್ನೂ ಹೆಚ್ಚಿನ 5,000 ಮೀಸಲು ಪಡೆಗಳನ್ನು ನಿಯೋಜಿಸಲು ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗುಂಟ್ಜ್ ಆದೇಶಿಸಿದ್ದಾರೆ.

ಇಸ್ರೇಲಿ ಗಡಿಯಲ್ಲಿ ಭಾನುವಾರದಿಂದ ಉದ್ವಿಗ್ನತೆ ಹೆಚ್ಚಾಗಿದೆ. ಗಡಿಯುದ್ದಕ್ಕೂ ಗಾಜಾದ ಉಗ್ರರ ಮೇಲೆ ಇಸ್ರೇಲ್ ಸೈನ್ಯ ಮಂಗಳವಾರ ಮುಂಜಾನೆ ರಾಕೆಟ್ ಹಾರಿಸಿದೆ. ಉಗ್ರರ ವಿರುದ್ಧ ಕೋಪಗೊಂಡ ಕಮಾಂಡರ್ ಉದ್ದೇಶಿತ ದಾಳಿಗಳನ್ನು ಮಾಡಿದರು. ಹಮಾಸ್ ಬಂಡುಕೋರರ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ.

ಆದರೆ, ಇಸ್ರೇಲಿ ವೈಮಾನಿಕ ದಾಳಿಯನ್ನು ತೀವ್ರವಾಗಿ ವಿರೋಧಿಸಿದ ಭಯೋತ್ಪಾದಕರು, ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ 250 ಕ್ಕೂ ಹೆಚ್ಚು ರಾಕೆಟ್​ಗಳನ್ನು ಹಾರಿಸಿದರು. ಈ ಹಿಂಸಾಚಾರದಲ್ಲಿ ಮಕ್ಕಳನ್ನು ಒಳಗೊಂಡು ಒಟ್ಟು 24 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಸತ್ತವರಲ್ಲಿ 15 ಮಂದಿ ಉಗ್ರರು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಆರು ಇಸ್ರೇಲಿ ನಾಗರಿಕರು ಗಾಯಗೊಂಡಿದ್ದಾರೆ.

ABOUT THE AUTHOR

...view details