ಕರ್ನಾಟಕ

karnataka

ETV Bharat / briefs

ನಮ್ಮ ಪಕ್ಷದಲ್ಲಿ ಸುಮಲತಾ ಮೂಗು ತೂರಿಸುವುದು ಬೇಡ:  ಕೋನರೆಡ್ಡಿ ಟಾಂಗ್​​​ - kannada news

ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್​ 10 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂಬ ಸಂಸದೆ ಸುಮಲತಾ ಹೇಳಿಕೆ ಮಾಜಿ ಶಾಸಕ ಕೋನರೆಡ್ಡಿ ಕಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅವರು ನಮ್ಮ ಪಕ್ಷದ ವಕ್ತಾರರಂತೆ ಮಾತನಾಡಬಾರದು. ಈ ಹೇಳಿಕೆ ಸಮಂಜಸವಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ

ಎನ್.ಎಚ್.ಕೋನರೆಡ್ಡಿ

By

Published : Jun 7, 2019, 9:18 AM IST

ಹುಬ್ಬಳ್ಳಿ:ಸುಮಲತಾ ಅವರು ನಮ್ಮ ಪಕ್ಷದ ವಕ್ತಾರರಲ್ಲ. ಅವರು ಈ ರೀತಿ ಮೂಗು ತುರಿಸುವ ಕೆಲಸ ಮಾಡಬಾರದು ಎಂದು ಮಂಡ್ಯ ಸಂಸದೆ ಸುಮಲತಾ ಅವರಿಗೆ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಕಟುವಾಗಿಯೆ ಎಚ್ಚರಿಕೆ ನೀಡಿದ್ದಾರೆ.

ಎನ್.ಎಚ್.ಕೋನರೆಡ್ಡಿ

ಕಾಂಗ್ರೆಸ್​ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 10 ಸ್ಥಾನ ಬರುತ್ತಿದ್ದವು ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ತೀರಗೇಟು ನೀಡಿದ್ದಾರೆ.

ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್,​ ಜೆಡಿಎಸ್ ಮೈತ್ರಿ ಮಾಡಿಕೊಳ್ಳದಿದ್ದರೆ ಲೋಕಸಭೆಯಲ್ಲಿ ಹೆಚ್ಚಿನ ಗೆಲುವು ಪಡೆಯುತ್ತಿದ್ದರು ಎಂದು ಹೇಳಲು ಅವರು ನಮ್ಮ ಪಕ್ಷದ ವಕ್ತಾರರಲ್ಲ. ಅದರ ಬಗೆಗಿನ ಚರ್ಚೆ ಸಮಂಜಸವೂ ಅಲ್ಲ. ನಮ್ಮ ಪಕ್ಷದ ವಿಚಾರ, ಕಾಂಗ್ರೆಸ್ ತೀರ್ಮಾನ ನಮಗೆ ಬಿಟ್ಟಿದ್ದು ಎಂದು ಕಾರವಾಗಿಯೇ ಹೇಳಿದರು.

ಜೆಡಿಎಸ್​ ರಾಜ್ಯ ಘಟಕದ ಅಧ್ಯಕ್ಷ ಎಚ್,ವಿಶ್ವನಾಥ ಅವರು ರಾಜೀನಾಮೆ ನೀಡುವುದಿಲ್ಲ. ಇತ್ತೀಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ 37ಕ್ಕೂ ಹೆಚ್ಚು ಸದಸ್ಯರು ವಿಶ್ವನಾಥ ಅವರೆ ಮುಂದುವರೆಯುವಂತೆ ತಿಳಿಸಿದ್ದಾರೆ. ರಾಷ್ಟ್ರಾಧ್ಯಕ್ಷ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೇ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ABOUT THE AUTHOR

...view details