ಮೈಶುಗರ್ ಕಾರ್ಖಾನೆ ಜತೆ ಮಂಡ್ಯದ ಜನರಿಗೆ ಭಾವನಾತ್ಮಕ ಸಂಬಂಧ: ಡಿ.ಕೆ.ಸುರೇಶ್ - ಡಿಕೆ ಸುರೇಶ ಮೈಶುಗರ್
ಮೈಶುಗರ್ ಖಾಸಗಿಯವರಿಗೆ ನೀಡಿರುವುದನ್ನು ಸಂಸದ ಡಿ.ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದು, ಯಾರಿಗೋ ಅವಕಾಶ ಮಾಡಿಕೊಡೋಕೆ ಈ ನಿರ್ಧಾರ ಬೇಡ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಮಂಡ್ಯ ಮೈಶುಗರ್ ಖಾಸಗಿಯವರಿಗೆ ನೀಡಿರುವುದನ್ನು ಸಂಸದ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದು, ಸಕ್ಕರೆ ಕಾರ್ಖಾನೆ ಜತೆ ಮಂಡ್ಯ ಜನರ ಭಾವನಾತ್ಮಕ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮೈಶುಗರ್ ಅನ್ನು ಖಾಸಗಿಯವರಿಗೆ ಕೊಡುವ ಹಿಂದೆ ಭ್ರಷ್ಟಾಚಾರದ ವಾಸನೆಯಿದೆ ಎಂದು ಆರೋಪಿಸಿದರು.
ಯಾರಿಗೋ ಅವಕಾಶ ಮಾಡಿಕೊಡೋಕೆ ಈ ನಿರ್ಧಾರ ಬೇಡ. ನಿಮ್ಮ ಶಾಸಕರಿಗೂ, ಮುಖಂಡರಿಗೋ ನೀಡುವುದು ಬೇಡ. ಹಾಗೇನಾದರೂ ಮಾಡಿದರೆ ಮಂಡ್ಯದ ಜನ ಸುಮ್ಮನಿರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನ್ ಲೈನ್ ತರಗತಿ ಬೇಡ:
ಮಕ್ಕಳಿಗೆ ಆನ್ ಲೈನ್ ಪಾಠ ಮಾಡುವ ವಿಚಾರ ಮಾತನಾಡಿ, ಆನ್ ಲೈನ್ ವಿದ್ಯಾಭ್ಯಾಸ ಶಿಕ್ಷಣ ವ್ಯವಸ್ಥೆ ಹಾಳು. ಮಕ್ಕಳಿಗೆ ಕಣ್ಣು,ಬೆನ್ನು ನೋವು ಬರುತ್ತೆ. ಇದನ್ನು ವೈದ್ಯರೇ ಹೇಳಿದ್ದಾರೆ ಎಂದರು.
ಮೊದಲು ಗ್ರಾಮೀಣ ಭಾಗಕ್ಕೆ ಇಂಟರ್ ನೆಟ್ ಸೌಲಭ್ಯ ಕೊಡಿ. ಮೊಬೈಲ್ ನೋಡಿದ್ರೆ ಮಕ್ಕಳು ಹಾಳಾಗ್ತಾರೆ. ಅಂಥದ್ರಲ್ಲಿ ಮೊಬೈಲ್ ಪಾಠ ಅರ್ಥವಾಗುತ್ತಾ? ಕ್ಲಾಸ್ ಗೆ ಹೋದ್ರೆ ಮಕ್ಕಳು ಕಲಿಯೋದು ಕಷ್ಟ. ಅಂಥದ್ರಲ್ಲಿ ಮೊಬೈಲ್ ನಲ್ಲಿ ಪಾಠ ಸಾಧ್ಯವೇ?. ಈ ವಿಚಾರವನ್ನು ಪೋಷಕರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇಂತಹ ಹುಚ್ಚು ದರ್ಬಾರ್ ನಿಲ್ಲಬೇಕು ಎಂದು ಹೇಳಿದರು.