ಬೆಂಗಳೂರು:ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಎದುರಾಗಿದ್ದು, ಚಾಮರಾಜನಗರ ಮಾದರಿಯ ಘಟನೆ ಇಲ್ಲಿ ಮರುಕಳಿಸದಿರಲಿ ಎಂದು ಸಂಸದ ಡಿ.ಕೆ. ಸುರೇಶ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅವರು, ಆರ್ ಆರ್ ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 200ಕ್ಕೂ ಹೆಚ್ಚು ಜನ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಸಂಜೆ 5 ಗಂಟೆಗೆ ಆಕ್ಸಿಜನ್ ಮುಕ್ತಾಯ ಆಗ್ತಿದೆ. ಜಿಲ್ಲಾಧಿಕಾರಿಗಳಿಗೂ ಆಡಳಿತ ಮಂಡಳಿ ತಿಳಿಸಿದೆ. ನಾನು ಕೂಡ ಕರೆ ಮಾಡಿ ತಿಳಿಸಿದ್ದೇನೆ. ಆರೋಗ್ಯ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಿದ್ದೇನೆ. ದಯವಿಟ್ಟು ಆಕ್ಸಿಜನ್ ವ್ಯವಸ್ಥೆ ಮಾಡಿಸಿ ಜನರ ಜೀವ ಉಳಿಸಿ. ಮತ್ತೊಮ್ಮೆ ಚಾಮರಾಜನಗರದ ಘಟನೆ ಆದ ರೀತಿಯಲ್ಲಿ ಇಲ್ಲಿ ಆಗುವುದು ಬೇಡ ಎಂದಿದ್ದಾರೆ.
ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ