ಕರ್ನಾಟಕ

karnataka

ETV Bharat / briefs

ಪ್ರವಾಹ ಪೀಡಿತ ಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಡಿಸಿ ಅಭಿರಾಮ್ ಜಿ.ಶಂಕರ್ - Mysore district news

ಪ್ರವಾಹ ಪೀಡಿತ ಪ್ರದೇಶವಾದ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಪ್ರವಾಹ ಸ್ಥಿತಿಗತಿ ಅರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

District collector visit to flood affected area
District collector visit to flood affected area

By

Published : Aug 6, 2020, 8:05 PM IST

ಮೈಸೂರು: ಕಾವೇರಿ ಕಣಿವೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿಯಿಂದ ನಲುಗುತ್ತಿರುವ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ವರ್ಷ ಇದೇ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ನಂತರ ಪ್ರವಾಹ ತಗ್ಗಿದ ಬಳಿಕ ಮತ್ತೆ ಗ್ರಾಮಕ್ಕೆ ಕಳುಹಿಸಲಾಗಿತ್ತು. ಮಡಿಕೇರಿಗೆ ಹತ್ತಿರವಾಗಿರುವುದರಿಂದ ಕೊಪ್ಪ ಗ್ರಾಮ ಬೇಗನೆ ಪ್ರವಾಹ ಪೀಡಿತ ಪ್ರದೇಶವಾಗಲಿದೆ. ಹೀಗಾಗಿ, ಜಿಲ್ಲಾಧಿಕಾರಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಓ ಪಿ.ಕೆ.ಮಿಶ್ರಾ ಅವರು ಸ್ಥಳ‌ ಪರಿಶೀಲನೆ ನಡೆಸಿದರು. ಪ್ರವಾಹದ‌ ಸ್ಥಿತಿಗತಿ ಅರಿತು ತ್ವರಿತವಾಗಿ ಮುಂದಿನ‌ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದರು.

ABOUT THE AUTHOR

...view details