ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೊಬ್ಬರಿ 80 ಕ್ಕೂ ಹೆಚ್ಚು ಜನರು ಕೊರೊನಾದಿಂದ ಸಾವನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಭುವನಂ ಸಂಸ್ಥೆಯ ರಾಯಭಾರಿಗಳಾದ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಭೇಟಿ ನೀಡಿ ಬಡ ಕುಟುಂಬಗಳಿಗೆ ಕಿಟ್ ವಿತರಿಸಿದರು.
ಇದನ್ನು ಓದಿ: ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನರ ಸಾವು
ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿ ಆಯೋಜಿಸಲಾದ ಉಷಾರ್ ಕರ್ನಾಟಕ ಕೊರೊನ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು, ಗ್ರಾಮದಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ 12 ಗಂಟೆಗಳ ಕಾಲ ಪಯಣ ಬೆಳಸಿ ಇಲ್ಲಿಯ ಜನರನ್ನು ಭೇಟಿ ಮಾಡಿದರು.
ಭುವನಂ ತಂಡದಿಂದ ಸವಸುದ್ದಿಯ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಜನರ ತೊಂದರೆಗಳನ್ನು ಆಲಿಸಿ, ಕೊರೊನಾ ಪೀಡಿತ 50 ಸಂಸಾರಗಳ ಮನೆಗೆ ತಾವೇ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು, ದಿನಸಿ, ಔಷಧ ಮತ್ತು ಮಾಸ್ಕ್ಗಳನ್ನು ಎಲ್ಲ ಬಡ ಕುಟುಂಬಗಳಿಗೆ ಹಂಚಿ ಮಾನವೀಯತೆ ಮೆರೆದಿದ್ದಾರೆ.