ಕರ್ನಾಟಕ

karnataka

ETV Bharat / briefs

5 ವರ್ಷದ ಹಿಂದೆ ಕೊನೆಯ ಏಕದಿನ ಪಂದ್ಯವಾಡಿದ್ದ ಕರುಣರತ್ನೆಗೆ ಲಂಕಾ ಕ್ಯಾಪ್ಟನ್​ ಪಟ್ಟ! - ವಿಶ್ವಕಪ್​

ವಿಶ್ವಕಪ್ ತಂಡಕ್ಕೆ ಟೆಸ್ಟ್​ ತಂಡದ ನಾಯಕನಾಗಿರುವ ಕರುಣರತ್ನೆಯನ್ನು ವಿಶ್ವಕಪ್​ ತಂಡದ ನಾಯಕನನ್ನಾಗಿ ನೇಮಿಸಿದೆ. ಹಾಲಿ ನಾಯಕ ಮಲಿಂಗಾ ಕೇವಲ ಬೌಲರ್​ ಆಗಿ ಮಾತ್ರ ಆಡಲಿದ್ದಾರೆ.

karun

By

Published : Apr 17, 2019, 11:26 PM IST

ಕೊಲಂಬೊ: 2015ರ ವಿಶ್ವಕಪ್​ನಂತರ ಲಂಕಾ ತಂಡ ಹಲವು ನಾಯಕರನ್ನು ಬದಲಾವಣೆ ಮಾಡುತ್ತಲೆ ಬಂದಿದೆ, ಆದರೆ ತಂಡ ಮಾತ್ರ ಸೋಲಿನ ಮೇಲೆ ಸೋಲು ಕಾಣುತ್ತಲೇ ಇರುವುದರಿಂದ ವಿಶ್ವಕಪ್​ಗೂ ಮುನ್ನ ಮಲಿಂಗಾರನ್ನು ಕೆಳೆಗಿಳಿಸಿ ಟೆಸ್ಟ್​​ ತಂಡದ ನಾಯಕ ಕರುಣರತ್ನೆಯನ್ನು ವಿಶ್ವಕಪ್​ಗೆ ಲಂಕಾ ತಂಡದ​ ನಾಯಕನನ್ನಾಗಿ ನೇಮಿಸಿದೆ.

ಇದರಿಂದ ಐಪಿಎಲ್​ ನಡುವೆಯೂ ದೇಶಿ ಕ್ರಿಕೆಟ್​ ಆಡಲು ಇಂಡಿಯಾ-ಲಂಕಾ ಪ್ರಯಾಣ ಮಾಡಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಲಸಿತ್​ ಮಲಿಂಗಾ ಕೇವಲ ಬೌಲರ್​ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ.

ವಿಶ್ವಕಪ್ ತಂಡಕ್ಕೆ ನಾಯಕನನ್ನ ಇಂದು ನೇಮಿಸಿ ಆದೇಶ ಹೊರಡಿಸಿರುವ ಲಂಕಾ ಕ್ರಿಕೆಟ್​ ಮಂಡಳಿ ಟೂರ್ನಿಗೆ ಪೂರ್ತಿ ತಂಡವನ್ನು ಪ್ರಕಟಿಸಿಲ್ಲ. ನಾಯಕನ ಬದಲಾವಣೆ ಬಗ್ಗೆ ಸ್ಪಷ್ಟ ಪಡಿಸಿರುವ ಲಂಕಾ ಮಂಡಳಿ ಈಗಾಗಲೆ ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಲಸಿತ್ ಮಲಿಂಗ, ಏಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಹಾಗೂ ತಿಸರಾ ಪರೇರಾ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ದಿಮುತ್ ಕರುಣಾರತ್ನೆಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಕರುಣಾರತ್ನೆ ಟೆಸ್ಟ್ ತಂಡದ ನಾಯಕನಾಗಿದ್ದು, 2015ರ ವಿಶ್ವಕಪ್​ ಬಳಿಕ ಏಕದಿನ ಪಂದ್ಯವನ್ನೇ ಆಡಿಲ್ಲ. 17 ಏಕದಿನ ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಸಹಿತ 190 ರನ್ ಗಳಿಸಿದ್ದಾರೆ. ಇದೀಗ ಕರುಣಾರತ್ನೆಗೆ ನಾಯಕತ್ವ ನೀಡಿರುವುದು ಇತರ ಲಂಕಾ ಆಟಗಾರರ ಆಶ್ಚರ್ಯ ತಂದಿದೆ.

ABOUT THE AUTHOR

...view details