ಮುಂಬೈ:ಮರ್ದಾನಿ ಸಿನಿಮಾ ಚಿತ್ರಕ್ಕೆ ಸಹಿ ಮಾಡುವ ಮೊದಲು 250 ಬಾರಿ ರಿಜೆಕ್ಟ್ ಆಗಿದ್ದೆ. ಯಾವುದಾದರೂ ಉಪಯುಕ್ತವಾದದ್ದು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ಆಗ ಅರ್ಥವಾಯಿತು ಎಂದು ನಟ ತಾಹಿರ್ ರಾಜ್ ಭಾಸಿನ್ ಹೇಳಿದ್ದಾರೆ.
"ಮರ್ದಾನಿ ಸಿನಿಮಾಗೆ ಸಹಿ ಹಾಕುವ ಮೊದಲು ಅಂದರೆ ಮೂರು ವರ್ಷಗಳ ಹಿಂದೆ ಸುಮಾರು 250 ಆಡಿಷನ್ಗಳಲ್ಲಿ ಭಾಗಿಯಾಗಿದ್ದೆ. ಆದರೆ, ಅದರಿಂದ ನಾನು ತಿರಸ್ಕರಿಸಲ್ಪಟ್ಟೆ. ನಾನು ಬೆಳೆಯಬೇಕು ಎಂದು ಗಂಟೆಗಟ್ಟಲೆ ಅಭ್ಯಾಸಗಳನ್ನು ಮಾಡಿದೆ" ಎಂದು ತಾಹಿರ್ ತಮ್ಮ ಹಳೆಯ ನೆನಪುಗಳನ್ನ ಸ್ಮರಿಸಿಕೊಂಡಿದ್ದಾರೆ.
“ಇಂದಿನ ಪ್ರಪಂಚವು ಸರಳ ಸಂದೇಶದ ಬಗ್ಗೆಯೇ ಇದೆ. ನಾವೆಲ್ಲರೂ ನೇರವಾಗಿ ಅಥವಾ ಪರೋಕ್ಷವಾಗಿ ಅನಿರೀಕ್ಷಿತ ಸಮಯದಿಂದ ಪ್ರಭಾವಿತರಾಗಿದ್ದೇವೆ. ಧೈರ್ಯವು ನಮ್ಮನ್ನು ಉತ್ತಮ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ. 250 ಬಾರಿ ತಿರಸ್ಕರಿಸಲ್ಪಟ್ಟರೂ ನಾನು ಭರವಸೆ ಕಳೆದುಕೊಂಡಿಲ್ಲ" ಎಂದು ಹೇಳಿದರು.
ತಾಹೀರ್ ಲೂಪ್ ಲ್ಯಾಪೆಟಾದಲ್ಲಿ ತಾಪ್ಸಿ ಪನ್ನು ಜೊತೆ ಪರದೆ ಹಂಚಿಕೊಂಡಿದ್ದಾರೆ. ಇನ್ನು ಬುಲ್ಬುಲ್ ತರಂಗ್ನಲ್ಲಿ ಸೋನಾಕ್ಷಿ ಸಿನ್ಹಾ ಜೊತೆ ಅಭಿನಯಿಸಿದ್ದಾರೆ.
"ನಿಜ ಹೇಳಬೇಕೆಂದರೆ, ನಾನು ಮುಂಬೈನಲ್ಲಿ ನನ್ನ ಆರಂಭಿಕ ಸಮಯವನ್ನು ಹೋರಾಟದ ಹಂತವಾಗಿ ನೋಡಿಲ್ಲ. ಇದು ಮಹತ್ವಾಕಾಂಕ್ಷೆಯ ಹಂತವಾಗಿತ್ತು. ನಾನು ಕನಸನ್ನು ದೃಶ್ಯೀಕರಿಸುತ್ತಿದ್ದೆ. ಅದನ್ನು ನನಸಾಗಿಸಲು ಆಶಿಸುತ್ತಿದ್ದೆ. ಯಶಸ್ಸನ್ನು ಆಚರಿಸಲು ಯೋಗ್ಯವಾಗಿಸುವ ಕಷ್ಟ ಮತ್ತು ಪ್ರಯಾಣ ಇದು" ಎಂದು ಅವರು ಹೇಳಿದರು.