ಕರ್ನಾಟಕ

karnataka

By

Published : May 12, 2019, 6:59 AM IST

ETV Bharat / briefs

ರಿಷಭ್​ ಪಂತ್​ಗೆ ಅ, ಆ, ಇ ಹೇಳಿಕೊಟ್ಟ ಧೋನಿ ಪುತ್ರಿ ಝೀವಾ... ವಿಡಿಯೋ ಸಖತ್​ ವೈರಲ್​!

ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ರಿಷಭ್​ ಪಂತ್​ಗೆ ಧೋನಿ ಪುತ್ರಿ ಝೀವಾ ಹಿಂದಿ ಭಾಷೆಯ ವರ್ಣಮಾಲೆ ಅ, ಆ, ಇ, ಈ ಹೇಳಿಕೊಂಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಅ, ಆ, ಇ ಹೇಳಿಕೊಟ್ಟ ಧೋನಿ ಪುತ್ರಿ ಝೀವಾ

ಚೆನ್ನೈ: ಸದಾ ಒಂದಿಲ್ಲೊಂದು ವಿಷಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ಧೋನಿ ಪುತ್ರಿ ಝೀವಾ ಸದ್ಯ ಮತ್ತೊಂದು ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾಳೆ.

ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ರಿಷಭ್​ ಪಂತ್​ಗೆ ಧೋನಿ ಪುತ್ರಿ ಝೀವಾ ಹಿಂದಿ ಭಾಷೆಯ ವರ್ಣಮಾಲೆ ಅ, ಆ, ಇ, ಈ ಹೇಳಿಕೊಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಇದಕ್ಕೆ ರಿಷಭ್​ ಧನ್ಯವಾದ ಕೂಡ ಹೇಳಿದ್ದಾರೆ. ಈ ಹಿಂದೆ ಕೂಡ ಧೋನಿ ಪುತ್ರಿ ಅನೇಕ ವಿಷಯಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು.

ಕಳೆದೆರಡು ದಿನಗಳ ಹಿಂದೆ 2ನೇ ಕ್ವಾಲಿಫೈಯರ್​ ಪಂಧ್ಯದಲ್ಲಿ ಚೆನ್ನೈ-ಡೆಲ್ಲಿ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಮಾಹಿ ನೇತೃತ್ವದ ಸಿಎಸ್​ಕೆ ತಂಡ ಫೈನಲ್​ ಪ್ರವೇಶ ಪಡೆದುಕೊಂಡಿದ್ದು, ಇಂದು ಮುಂಬೈ ವಿರುದ್ಧ ಪ್ರಶಸ್ತಿಗಾಗಿ ಫೈಟ್​ ನಡೆಸಲಿದೆ.

ABOUT THE AUTHOR

...view details