ಕರ್ನಾಟಕ

karnataka

ETV Bharat / briefs

'ಆರ್​ಸಿಬಿ ಉತ್ತಮ ತಂಡ ಆದರೆ ಪೇಪರ್​ ಹುಲಿ'..! ಟ್ವೀಟ್ ಮೂಲಕ ವಿಜಯ್ ಮಲ್ಯ ಆಕ್ರೋಶ - ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಒಂದು ಸಾಲಿನ ಟ್ವೀಟ್ ಮೂಲಕ ಆರ್​ಸಿಬಿ ತಂಡದ ಪ್ರದರ್ಶನಕ್ಕೆ ವಿಜಯ್ ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯ್ ಮಲ್ಯ

By

Published : May 7, 2019, 5:52 PM IST

ಹೈದರಾಬಾದ್: ಪ್ರಸ್ತಕ ಐಪಿಎಲ್​ ಟೂರ್ನಿಯ ಪ್ಲೇ ಆಫ್​​​​ ಹಂತಕ್ಕೇರುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

ಒಂದು ಸಾಲಿನ ಟ್ವೀಟ್ ಮೂಲಕ ಆರ್​ಸಿಬಿ ತಂಡದ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಲ್ಯ, ಆರ್​ಸಿಬಿ ಉತ್ತಮ ತಂಡ, ಬೇಸರದ ಸಂಗತಿ ಎಂದರೆ ಅದು ಕೇವಲ ಪೇಪರ್​ ಹುಲಿ ಎಂದು ಟ್ವೀಟ್ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಈ ಆವೃತ್ತಿಯಲ್ಲಿ ಆರಂಭಿಕ ಆರು ಪಂದ್ಯಗಳನ್ನೂ ಸೋತು ನಂತರದಲ್ಲಿ ಕಂಬ್ಯಾಕ್ ಮಾಡಿತ್ತು. ಆದರೆ ಪ್ಲೇ ಆಫ್​ ಎಂಟ್ರಿ ನೀಡಲು ಕೊಹ್ಲಿ ಪಡೆಗೆ ಸಾಧ್ಯವಾಗಲಿಲ್ಲ.

ಒಟ್ಟಾರೆ 14 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಎಂಟು ಸೋಲಿನೊಂದಿಗೆ ಆರ್​ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಟೂರ್ನಿ ಕೊನೆಗೊಳಿಸಿದೆ.

ABOUT THE AUTHOR

...view details