ಮಂಗಳೂರು: ಅಂತಾರಾಜ್ಯ ವಾಹನ, ಮನೆ ಮತ್ತು ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಕೊಳ್ನಾಡು ಕಾರ್ನಾಡು ಗ್ರಾಮದ ಸವಾದ್ ಚವ್ವಾ ಯಾನೆ ಕರಿಮಣಿ (24) ತೋಕೂರು ಗ್ರಾಮದ ಮೊಹಮ್ಮದ್ ಸಿನಾನ್ (19) ಬಂಧಿತರು.
ಮುಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ.. ಅಂತಾರಾಜ್ಯ ವಾಹನ, ಮನೆ, ದೈವಸ್ಥಾನ ಕಳ್ಳರ ಬಂಧನ - undefined
ಅಂತಾರಾಜ್ಯ ವಾಹನ, ದೇವಸ್ಥಾನಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಾರ್, ಬೈಕ್, ಹಣವನ್ನು ವಶಪಡಿಸಿಕೊಂಡಿದ್ದಾರೆ. ಇಂಥ ಕೃತ್ಯಗಳಲ್ಲಿ ಭಾಗಿಯಾದ ಇತರ ಆರೋಪಿಗಳಿಗೂ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರು ಕಳ್ಳರನ್ನು ಬಂಧಿಸಿರುವುದು. ಅವರಿಂದ ವಶಪಡಿಸಿಕೊಳ್ಳಲಾದ ಕಾರ್, ಬೈಕ್ಗಳು
ಬಂಧಿತರಿಂದ ಗೋವಾ ರಾಜ್ಯದ ಫಾರ್ಚೂನರ್ ಕಾರ್ ಹಾಗೂ 2 ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಚಿಲ್ಲರೆ ಹಣವನ್ನು ಮುಲ್ಕಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳತನಕ್ಕೆ ಬಳಸಿದ ಟಾಟಾ ಪಿಕ್‌ಅಪ್ , ಡಿಸ್ಕವರ್ ಬೈಕ್ ಮತ್ತು ಪಲ್ಸರ್ ಬೈಕ್ ಅನ್ನು ಹಾಗೂ ಆರೋಪಿಗಳಿಂದ 3 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯಗಳಲ್ಲಿ ಭಾಗಿಯಾಗಿರುವ ಕಾರ್ನಾಡುವಿನ ಹೀಯಾಜ್ ಹಾಗೂ ಇನ್ನಿತರ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.