ನವದೆಹಲಿ:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತದ ಪರಿಣಾಮ ದಕ್ಷಿಣದ ರಾಜ್ಯಗಳಿಗೆ ಫಣಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೇರಳ, ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ಲಕ್ಷದ್ವೀಪಗಳಿಗೆ ಫಣಿ ಚಂಡಮಾರುತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶನಿವಾರದ ಬಳಿಕ ಮತ್ತಷ್ಟು ಪ್ರಬಲವಾಗಿರುವ ಫಣಿ ಚಂಡಮಾರುತದಿಂದ ಇಂದು ದಕ್ಷಿಣ ರಾಜ್ಯಗಳ ಕರಾವಳಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಆಂಧ್ರ ಪ್ರದೇಶ ಹಾಗೂ ತಮಿಳು ನಾಡಿನ ಕರಾವಳಿ ಭಾಗದಿಂದ ಚಂಡುಮಾರುತ ಹಾದುಹೋಗಲಿದೆ. ಈ ವೇಳೆ ತಮಿಳುನಾಡು ಹಾಗೂ ಕೇರಳದ ಇಡುಕ್ಕಿ,ಮಲಪ್ಪುರಂ,ತ್ರಿಶೂರ್ ಹಾಗೂ ಎರ್ನಾಕುಲಂ ಭಾಗಗಳಲ್ಲಿ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ತೀರಲದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಫಣಿ ಚಂಡಮಾರುತ ವೇಗ ಗಂಟೆಗೆ 160ಕೀ.ಮೀವರೆಗೆ ಇರಲಿದ್ದು ಏಪ್ರಿಲ್ 28ರಿಂದ ಮೇ 1ರವರೆಗೆ ಪ್ರಬಲವಾಗಿರಲಿದೆ.