ನವದೆಹಲಿ:ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭಾರತ್ ಬಿಡುಗಡೆಗೆ ತಡೆಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಜಸ್ಟೀಸ್ ಜೆ ಆರ್ ಮಿಧಾ ಹಾಗೂ ಚಂದೆರ್ ಶೇಖರ್ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಅರ್ಜಿದಾರರು ಕೇವಲ ಟ್ರೇಲರ್ ಮಾತ್ರ ನೋಡಿದ್ದು, ಪೂರ್ಣ ಸಿನಿಮಾ ವೀಕ್ಷಿಸಿಲ್ಲ. ಅಲ್ಲದೆ ಈ ಅರ್ಜಿ ಅಪಕ್ವವಾಗಿದೆ ಎಂದು ಅಭಿಪ್ರಾಯಕ್ಕೆ ಬಂದ ಪೀಠ ಅರ್ಜಿಯನ್ನು ತಳ್ಳಿಹಾಕಿದೆ. ಈ ಮೂಲಕ ಭಾರತ್ ಸಿನಿಮಾ ಬಿಡುಗಡೆಗೆ ಇದ್ದ ಆತಂಕ ದೂರವಾಗಿದೆ.ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ವಿಕಾಸ್ ತ್ಯಾಗಿ, ಭಾರತ್ ಎನ್ನುವ ಪದವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿ, ಚಿತ್ರದ ಟೈಟಲ್‌ನ ಬದಲಿಸುವಂತೆ ಸಿನಿಮಾ ತಂಡಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು.