ಮುಂಬೈ:ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರ "ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್" ವಾಟ್ಸ್ಆ್ಯಪ್ಗಳಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಜೀ ಸಂಸ್ಥೆ ಸಲ್ಲಿಸಿದ ಮೊಕದ್ದಮೆಯ ಆಧಾರದ ಮೇಲೆ ದೆಹಲಿ ಹೈಕೋರ್ಟ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಆದೇಶಿಸಿದೆ. ಪೈರಸಿ ಮೂಲಕ ಚಿತ್ರೀಕರಣವಾದ ಈ ವಿಡಿಯೋ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿತ್ತು.
ವಾಟ್ಸ್ಆ್ಯಪ್ ಮೂಲಕ ಹರಿದಾಡಿದ 'ರಾಧೆ': ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್ ಸೂಚನೆ
"ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್" ವಾಟ್ಸ್ಆ್ಯಪ್ಗಳಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಜೀ ಸಂಸ್ಥೆ ಸಲ್ಲಿಸಿದ ಮೊಕದ್ದಮೆಯ ಆಧಾರದ ಮೇಲೆ ದೆಹಲಿ ಹೈಕೋರ್ಟ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಆದೇಶಿಸಿದೆ.
ಚಿತ್ರದ ಪ್ರತಿಗಳನ್ನು ಮಾರಾಟ ಮಾಡಲು ಬಳಸುತ್ತಿರುವ ಮೊಬೈಲ್ ಸಂಖ್ಯೆಗಳಿಗೆ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ವಾಟ್ಸ್ಆ್ಯಪ್ಗೆ ನಿರ್ದೇಶನ ನೀಡಿದೆ. ದೇಶದ ಪ್ರಮುಖ ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳಿಗೆ ಈ ರೀತಿ ಪೈರಸಿ ನಡೆಸಿದವರ ಮತ್ತು ವಿಡಿಯೋ ಹರಿಬಿಟ್ಟ ಚಂದಾದಾರರ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ. ಈ ಬಳಿಕ ಜೀ ಸಂಸ್ಥೆ ಅವರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಸೂಚಿಸಿದೆ.
ಈ ಚಿತ್ರವು 2021ರ ಮೇ 13ರಂದು ಫಿರ್ಯಾದಿಯ ಡಿಜಿಟಲ್ ಎಂಟರ್ಟೈನ್ಮೆಂಟ್ ಸ್ಟ್ರೀಮಿಂಗ್ ಸೇವೆ ಜೀ 5ನಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಬಿಡುಗಡೆಯಾಯಿತು. ಬಿಡುಗಡೆಯಾಗುತ್ತಿದ್ದಂತೆ ಪೈರಸಿ ಮಾಡಿದ ಕೆಲ ಕಿಡಿಗೇಡಿಗಳು ವಾಟ್ಸ್ಆ್ಯಪ್ ಮೂಲಕ ಹರಿಬಿಟ್ಟಿದ್ದಾರೆ.