ಕರ್ನಾಟಕ

karnataka

ETV Bharat / briefs

ಮೋದಿ ವಿರುದ್ದ ಸ್ಪರ್ಧೆ ಮಾಡದ ಪ್ರಿಯಾಂಕಾ-ಕಾರಣವೇನು ಗೊತ್ತೇ?​​ - ಚುನಾವಣೆ

ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯದಿರಲು ಕಾರಣವೇನು..? ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿಯಬಾರದು ಎಂಬುದು ಅವರ ಸ್ವಂತ ನಿರ್ಧಾರವಾಗಿತ್ತೇ..? ಈ ಬಗ್ಗೆ ಸ್ಯಾಮ್‌ ಪಿತ್ರೋಡಾ ವಿವರಣೆ ಕೊಟ್ಟರು.

ಪ್ರಿಯಾಂಕಾ ಗಾಂಧಿ

By

Published : Apr 26, 2019, 8:53 PM IST

ನವದೆಹಲಿ: ಉತ್ತರಪ್ರದೇಶದ ವಾರಣಾಸಿಯಿಂದ ನರೇಂದ್ರ ಮೋದಿ ವಿರುದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ವು. ಆದರೆ, ಕೊನೆಯ ಕ್ಷಣಗಳಲ್ಲಿ ದಿಢೀರ್​ ಆಗಿ ಕೈ ಪಕ್ಷ ಮೋದಿ ವಿರುದ್ಧ ಅಜಯ್​ ರೈ ಗೆ ಟಿಕೆಟ್​ ನೀಡಿ ಅಚ್ಚರಿ ಮೂಡಿಸಿತ್ತು. ಇದೀಗ ಪ್ರಿಯಾಂಕಾ ಈ ಕ್ಷೇತ್ರದಿಂದ ಕಣಕ್ಕಿಳಿಯದಿರಲು ಕಾರಣ ಏನು ಎಂಬುದನ್ನು ಕಾಂಗ್ರೆಸ್​ ಬಹಿರಂಗಪಡಿಸಿದೆ.

ಈ ಬಗ್ಗೆ ಮಾತನಾಡಿರುವ ಸ್ಯಾಮ್ ಪಿತ್ರೋಡಾ, ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿಯಬಾರದು ಎಂಬುದು ಪ್ರಿಯಾಂಕ ಗಾಂಧಿಯವರ ಸ್ವಂತ ನಿರ್ಧಾರ. ಅದು ಪಕ್ಷದ ನಿರ್ಧಾರ ಅಲ್ಲ ಎಂದರು. ಈ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಉಳಿದ ಕ್ಷೇತ್ರಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಅವರೇ ಈ ನಿರ್ಧಾರ ಕೈಗೊಂಡಿದ್ದರು. ಮತ್ತು ತಾನು ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ತಾವು ಶ್ರಮಿಸುವುದಾಗಿ ತಿಳಿಸಿದರು ಎಂದು ಸ್ಯಾಮ್​ ವಿವರಿಸಿದ್ದಾರೆ.

ವಾರಣಾಸಿಯಿಂದ ಈಗಾಗಲೇ ಮೋದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಮೇ 19ರಂದು ಇಲ್ಲಿ ಮತದಾನ ನಡೆಯಲಿದೆ.

ABOUT THE AUTHOR

...view details