ಕರ್ನಾಟಕ

karnataka

ETV Bharat / briefs

12 ತಿಂಗಳ ವನವಾಸ ಮುಕ್ತಾಯ.... ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚಕ್ರಾಧಿಪತ್ಯ ಸ್ಥಾಪಿಸಲಿದ್ದಾರಂತೆ ವಾರ್ನರ್​! - ಡೇವಿಡ್​ ವಾರ್ನರ್​

ದ. ಅಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬಾಳ್​ ಟ್ಯಾಂಪರಿಂಗ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣ 12 ತಿಂಗಳುಗಳ ಕಾಲ ಕ್ರಿಕೆಟ್​ನಿಂದ ನಿಷೇದಕ್ಕೊಳಪಟ್ಟಿದ್ದರು. ಈ ವೇಳೆ ತಮ್ಮ ಕುಟುಂಬದ ಜೊತೆ ಸಮಯ ಕಳೆದಿದ್ದ ವಾರ್ನರ್​ ಕ್ರಿಕೆಟ್​ನ ಬಗ್ಗೆ ಇರುವ ಅಭಿಮಾನವನ್ನು ಮಾತ್ರ ಕಳೆದುಕೊಳ್ಳದೆ ಐಪಿಎಲ್​ನಲ್ಲಿ ತಮ್ಮ ಆರ್ಭಟ ಮುಂದುವರಿಸಿ ಪ್ರಾಂಚೈಸಿಗಳ ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಫಿಂಚ್​ ತಮ್ಮ ಸ್ನೇಹಿತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ನರ್​

By

Published : May 2, 2019, 8:54 PM IST

ನವದೆಹಲಿ: 12 ತಿಂಗಳ ಬಳಿಕ ಹಳದಿ ಜರ್ಸಿ ತೊಡುತ್ತಿರುವ ಡೇವಿಡ್​ ವಾರ್ನರ್​ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಚಕ್ರಾಧಿಕಪತ್ಯ ಸ್ಥಾಪಿಸಲಿದ್ದಾರೆ ಎಂದು ಆಸೀಸ್​ ನಾಯಕ ಆ್ಯರೋನ್​ ಪಿಂಚ್​ ಅಭಿಪ್ರಾಯ ಪಟ್ಟಿದ್ದಾರೆ.

ದ. ಅಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬಾಳ್​ ಟ್ಯಾಂಪರಿಂಗ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣ 12 ತಿಂಗಳುಗಳ ಕಾಲ ಕ್ರಿಕೆಟ್​ನಿಂದ ನಿಷೇದಕ್ಕೊಳಪಟ್ಟಿದ್ದರು. ಈ ವೇಳೆ ತಮ್ಮ ಕುಟುಂಬದ ಜೊತೆ ಸಮಯ ಕಳೆದಿದ್ದ ವಾರ್ನರ್​ ಕ್ರಿಕೆಟ್​ನ ಬಗ್ಗೆ ಇರುವ ಅಭಿಮಾನವನ್ನು ಮಾತ್ರ ಕಳೆದುಕೊಳ್ಳದೆ ಐಪಿಎಲ್​ನಲ್ಲಿ ತಮ್ಮ ಆರ್ಭಟ ಮುಂದುವರಿಸಿ ಪ್ರಾಂಚೈಸಿಗಳ ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಫಿಂಚ್​ ತಮ್ಮ ಸ್ನೇಹಿತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದು ವರ್ಷದಿಂದ ಹೊರಗಿರುವ ವಾರ್ನರ್ ಕ್ರಿಕೆಟ್​ ಆಡದೆ​ ಹಸಿದಿದ್ದಾರೆ. ಅವರೊಬ್ಬ ಸೂಪರ್​ ಪ್ಲೇಯರ್​ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ. ಧೀರ್ಘ ಸಮಯದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದು, ಜೊತೆಗೆ ಇದೇ ವೇಳೆ ವಿಶ್ವಕಪ್​ ಆರಂಭವಾಗುತ್ತಿರುವುದರಿಂದ ತಮ್ಮ ಬ್ಯಾಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸುನಾಮಿ ಸೃಷ್ಠಿಸಿ ಮತ್ತೆ ಸೀಮಿತ ಓವರ್​ನ ಸಾಮ್ರಾಟ್​ ಆಗಲಿದ್ದಾರೆ. ವಾರ್ನರ್​ ಸ್ಮಿತ್​ ಆಗಮನ ನಮ್ಮ ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಈಗಾಗಲೆ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಸರಣಿ ಜಯಿಸಿದ್ದ ನಮ್ಮ ತಂಡ ಸ್ಮಿತ್​-ವಾರ್ನರ್​ ಜೋಡಿ ಪುನಾರಾಗಮನ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಆಸೀಸ್​ ನಾಯಕ ತಿಳಿಸಿದ್ದಾರೆ..

ವಾರ್ನರರ ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 12 ಪಂದ್ಯಗಳಿಂದ 7 ಅರ್ಧಶತಕ ಹಾಗೂ 1 ಶತಕ ಸಹಿತ 692 ರನ್​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಇನ್ನು 2 ಲೀಗ್​ ಪಂದ್ಯವಿರುವಂತೆಯೇ ಗರಿಷ್ಠ ಸ್ಕೋರರ್​ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿರುವ ಕನ್ನಡಿಗ ರಾಹಲ್​ಗಿಂತ 172 ರನ್​ಗಳಿಂದ ಮುಂದಿದ್ದು ಟೂರ್ನಿ ಮುಗಿದರು ಆರೆಂಜ್​ ಕ್ಯಾಪ್​ ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ ಬಾಲ್​ ಟ್ಯಾಂಪರಿಂಗ್​ ಪ್ರಕರಣದಿಂದ ನೊಂದಿದ್ದ ವಾರ್ನರ್​ ಒಂದು ವರ್ಷದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮತ್ತೆ ಎಂಟ್ರಿಕೊಡುತ್ತಿರುವುದು ಕೇವಲ ಆಸ್ಟ್ರೇಲಿಯಕ್ಕಲ್ಲದೆ ಕ್ರಿಕೆಟ್​ ಪ್ರೇಮಿಗಳಿಗೆ ಖುಷಿಯ ವಿಚಾರವಾಗಿದೆ. ಅವರ ಸ್ಫೋಟಕ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ABOUT THE AUTHOR

...view details