ದಾವಣಗೆರೆ: ಕೊರೊನಾ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕರ್ಫ್ಯೂಗೆ ಅಸ್ತು ಎಂದಿದೆ. ಜನತಾ ಕರ್ಫ್ಯೂನಿಂದಾಗಿ ದಾವಣಗೆರೆ ವಿವಿಯ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ದಾವಣಗೆರೆ ವಿವಿ ಆದೇಶ ಹೊರಡಿಸಲಾಗಿದೆ.
ಕರ್ಫ್ಯೂಗೆ ಸರ್ಕಾರ ಅಸ್ತು: ದಾವಣಗೆರೆ ವಿವಿಯ ಪರೀಕ್ಷೆಗಳು ಮುಂದೂಡಿಕೆ - ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಪತಿ ಹೆಚ್.ಎಸ್ ಅನಿತ
ನಾಳೆಯಿಂದ ನಡೆಯಬೇಕಿದ್ದ ಬಿಇಡಿ ಪರೀಕ್ಷೆಗಳನ್ನು ಮುಂದೂಡಿ ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಪತಿ ಹೆಚ್.ಎಸ್ ಅನಿತಾ ಆದೇಶಿಸಿದ್ದಾರೆ.
Davangere university
ಲಾಕ್ಡೌನ್ ಹಿನ್ನೆಲೆ ಪರೀಕ್ಷೆಗಳೆಲ್ಲ ಮುಂದೂಡಿಕೆ ಮಾಡಲಾಗಿದ್ದು, ನಾಳೆಯಿಂದ ನಡೆಯಬೇಕಿದ್ದ ಬಿಇಡಿ ಪರೀಕ್ಷೆಗಳನ್ನು ಮುಂದೂಡಿ ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಪತಿ ಹೆಚ್.ಎಸ್ ಅನಿತಾ ಆದೇಶಿಸಿದ್ದಾರೆ.
ಲಾಕ್ಡೌನ್ನಿಂದ ಗೊಂದಲದಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆಯ ದಿನಾಂಕವನ್ನು ದಾವಣಗೆರೆ ವಿವಿ ಪ್ರಕಟಿಸಲಿದೆ.