ಕರ್ನಾಟಕ

karnataka

ETV Bharat / briefs

ರಾಬರ್ಟ್​ ಡೈಲಾಗ್​ ಜೂಕ್​ಬಾಕ್ಸ್​.. ಹೊಸತನಕ್ಕೆ ಸಾಕ್ಷಿಯಾಯ್ತು ಡಿ ಬಾಸ್​ ರಾಬರ್ಟ್ ಚಿತ್ರ - ರಾಬರ್ಟ್​ ಡೈಲಾಗ್​ ಜೂಕ್​ಬಾಕ್ಸ್

ನಾವು ನೋಡೋಕೆ ಮಾತ್ರ ಕ್ಲಾಸ್. ವಾರ್‌ಗೆ ಇಳಿದ್ರೆ ಫುಲ್ ಮಾಸ್. ಸಿನಿಮಾದ ಹಾಡುಗಳಿಗೆ ಜೂಕ್ ಬಾಕ್ಸ್ ಇರೋದು ಕಾಮನ್. ಆದರೆ, ದರ್ಶನ್ ರಾಬರ್ಟ್ ಸಿನಿಮಾದ ಡೈಲಾಗ್​ಗಳ ಜೂಕ್ ಬಾಕ್ಸ್ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

Darshan's Robert
Darshan's Robert

By

Published : May 13, 2021, 4:50 PM IST

Updated : May 13, 2021, 5:25 PM IST

‘ರಾಬರ್ಟ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಯಶಸ್ವಿ 50 ದಿನಗಳನ್ನ ಪೂರೈಸಿರುವ ರಾಬರ್ಟ್ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

ಈ ಸಿನಿಮಾ ಬೆಳ್ಳಿ ತೆರೆ ಹಾಗೂ ಸ್ಮಾಲ್ ಸ್ಕ್ರೀನ್​ನಲ್ಲಿ ಬಿಡುಗಡೆ ಆಗಿ ಧೂಳ್ ಎಬ್ಬಿಸಿದೆ. ಸದ್ಯ ರಾಬರ್ಟ್ ಸಿನಿಮಾ ಈಗ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ. ಸಿನಿಮಾದ ಹಾಡುಗಳಿಗೆ ಜೂಕ್ ಬಾಕ್ಸ್ ಇರೋದು ಕಾಮನ್. ಆದರೆ, ದರ್ಶನ್ ರಾಬರ್ಟ್ ಸಿನಿಮಾದ ಡೈಲಾಗ್​ಗಳ ಜೂಕ್ ಬಾಕ್ಸ್ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಅದಕ್ಕೆ ಕಾರಣ ರಾಬರ್ಟ್ ಸಿನಿಮಾದಲ್ಲಿರುವ ಕಿಕ್ ಜೊತೆಗೆ ಪಂಚಿಂಗ್ ಡೈಲಾಗ್​ಗಳು.

ಈ ಚಿತ್ರ ಯಶಸ್ಸು ಆಗೋದಿಕ್ಕೆ ಕಾರಣವೇ ಚಿತ್ರದಲ್ಲಿರುವ ಪವರ್ ಫುಲ್ ಡೈಲಾಗ್​ಗಳು. ಯುವ ಸಂಭಾಷಣೆಕಾರರಾದ ಮಜಾಟಾಕೀಸ್ ಖ್ಯಾತಿಯ ರಾಜಶೇಖರ್ ಹಾಗೂ ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಈ ಡೈಲಾಗ್ ಬರೆದಿದ್ದಾರೆ.

ರಾಬರ್ಟ್

ನಾವು ನೋಡೋಕೆ ಮಾತ್ರ ಕ್ಲಾಸ್.... ವಾರ್‌ಗೆ ಇಳಿದ್ರೆ ಫುಲ್ ಮಾಸ್, ಒಬ್ಬರ ಲೈಫ್‌ನಲ್ಲಿ ನಾವು ಹೀರೋ ಆಗ್ಬೇಕು ಅಂತಂದ್ರೆ, ಇನ್ನೊಬ್ಬರ ಲೈಫ್‌ನಲ್ಲಿ ವಿಲನ್ ಆಗಲೇಬೇಕು, ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು, ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು. ನನಗಿಂತ ಟೆರರ್ ಆಗಿರಬೇಕು..ನನಗಿಂತ ವೈಲೈಂಟ್ ಆಗಿರಬೇಕು ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಹೇಳುವ ಡೈಲಾಗ್ ಗಳು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದವು.

ಈ ಡೈಲಾಗ್​ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಆನಂದ್ ಆಡಿಯೋ ಸಂಸ್ಥೆಗೆ, ದರ್ಶನ್ ಅಭಿಮಾನಿಗಳು ಕೇಳಿ ಕೊಂಡಿದ್ರಂತೆ. ಹೀಗಾಗಿ ಆಡಿಯೋ ಜೂಕ್ ಬಾಕ್ಸ್ ತರ, ಆನಂದ್ ಆಡಿಯೋ ಸಂಸ್ಥೆ ಡೈಲಾಗ್ ಜೂಕ್ ಬಾಕ್ಸ್ ಮಾಡಿದ್ವಿ ಅಂತಾರೆ ಆನಂದ್ ಆಡಿಯೋ ಸಂಸ್ಥೆ ಮಾಲೀಕರಾದ ಶ್ಯಾಮ್.

ಮುಂದಿನ ದಿನಗಳಲ್ಲಿ ಕನ್ನಡದ ಎಲ್ಲಾ ಸ್ಟಾರ್​ಗಳ ಸಿನಿಮಾಗಳ ಡೈಲಾಗ್​ಗಳನ್ನ, ಡೈಲಾಗ್ ಜೂಕ್ ಬಾಕ್ಸ್ ಮಾಡಲು ನಿರ್ಧರಿಸಿದ್ದೇವೆ ಅಂತ ಆನಂದ್ ಆಡಿಯೋ ಮಾಲೀಕರು ಹೇಳಿದ್ದಾರೆ. ಈ ಟ್ರೆಂಡ್ ದರ್ಶನ್ ಅವರ ರಾಬರ್ಟ್ ಸಿನಿಮಾದಿಂದ ಶುರುವಾಗಿದೆ. ಈಗಾಗ್ಲೇ ರಾಬರ್ಟ್ ಸಿನಿಮಾದ ಹಾಡುಗಳನ್ನ ಮಿಲಿಯನ್ ಗಟ್ಟಲೆ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ರಾಬರ್ಟ್ ಸಿನಿಮಾದ ಡೈಲಾಗ್​ಗಳನ್ನ ಎಷ್ಟು ಮಿಲಿಯನ್ ಜನ ನೋಡ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

Last Updated : May 13, 2021, 5:25 PM IST

ABOUT THE AUTHOR

...view details