ನ್ಯೂಯಾರ್ಕ್:ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಳ್ಳಬೇಕು ಎಂಬುದು ಈಗಿನ ಯುವಜನತೆಯ ಕ್ರೇಜ್. ಅದರಲ್ಲೂ ಎತ್ತರದ ಪ್ರದೇಶ, ಈಜುಕೊಳ, ರೈಲ್ವೆ ಟ್ರ್ಯಾಕ್ ಹೀಗೆ ಅನೇಕ ಅಪಾಯಕಾರಿ ಪ್ರದೇಶಗಳಲ್ಲಿ ಫೋಟೋ ತೆಗೆಸಿಕೊಂಡು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವವರಿದ್ದಾರೆ.
ಡೇಂಜರಸ್ ಫೋಟೋಗ್ರಫಿ... ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ ಹಾಟ್ ಜೋಡಿ! - ಹಾಟ್ ಜೋಡಿ
ಸಮುದ್ರದಲ್ಲಿ ವಿವಿಧ ಭಂಗಿಗಳಲ್ಲಿ ಈ ಜೋಡಿ ಫೋಟೋಗ್ರಫಿ ಮಾಡಿಸಿದ್ದು, ಇದೀಗ ಆ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ
ಇದೀಗ ವಿದೇಶಿ ಜೋಡಿಯೊಂದು ಅತಿ ಅಪಾಯಕಾರಿ ಸ್ಥಳದಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಂಡು ಅದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ. ಇದೀಗ ಅಮೆರಿಕದ ಕೆಲ್ಲಿ ಮತ್ತು ಕೋಡಿ ವರ್ಕ್ಮ್ಯಾನ್ ಎಂಬ ಜೋಡಿ ಡೇಂಜರಸ್ ಫೋಟೋ ಶೇರ್ ಮಾಡಿ ಎಲ್ಲರ ಚಿತ್ತವನ್ನ ತಮ್ಮತ್ತ ಸೆಳೆದುಕೊಂಡಿದ್ದಾರೆ. ಇಬ್ಬರು ಅಪಾಯಕಾರಿ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.
ಇಂಡೋನೇಷ್ಯಾದ ಬಾಲಿ ನಗರದ ಉಬುದ್ ಸಮುದ್ರ ಪ್ರದೇಶದಲ್ಲಿ ಈ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಅರಣ್ಯಪ್ರದೇಶದ ಮಧ್ಯೆ, ಸಮುದ್ರದಲ್ಲಿ ನಿಂತು ಇವರು ಫೋಟೋ ತೆಗೆಸಿಕೊಂಡಿದ್ದಾರೆ. ಹಾಟ್ ಆ್ಯಂಡ್ ಸೆಕ್ಸಿ ಆಗಿ ಈ ದಂಪತಿಗಳು ತೆಗೆಸಿಕೊಂಡಿರುವ ಫೋಟೋಗಳಿಗೆ ನೆಟಿಜನ್ಸ್ ಫುಲ್ ಫಿದಾ ಆಗಿದ್ದಾರೆ.